ಕಾಂತಾರ ಪ್ರೀಕ್ವೆಲ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಹೊಂಬಾಳೆ ಫಿಲ್ಮ್ಸ್ ಕಾಂತಾರ ಒಂದನೇ ಅಧ್ಯಾಯದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ರಿಷಬ್ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಕಾಂತಾರ ಚಿತ್ರತಂಡ ರಿಲೀಸ್ ಮಾಡಿದ ಹೊಸ ಫಸ್ಟ್ಲುಕ್ನಲ್ಲಿ ರಿಷಬ್ ಕೈಯಲ್ಲಿ ಕೊಡಲಿ ಮತ್ತು ತ್ರಿಶೂಲ ಹಿಡಿದು ಆರ್ಭಟಿಸುವ ದೃಶ್ಯವನ್ನು ಕಾಣಬಹುದಾಗಿದೆ. ಫಸ್ಟ್ಲುಕ್ನಲ್ಲಿ ಶಿವನ ರೂಪ ಧರಿಸಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಸದ್ಯ ಫಸ್ಟ್ ರಿಲೀಸ್ ಬಳಿಕ ಈ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
ಇನ್ನು ಫಸ್ಟ್ಲುಕ್ನಲ್ಲಿ ಕಾಳಗದ ಚಿತ್ರ ಕಂಡಿದೆ. ಮಾತ್ರವಲ್ಲದೆ ಆರು ಭಾಷೆಯಲ್ಲಿ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ, ಇಂಗ್ಲೀಷ್ನಲ್ಲಿ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.
ಕಾಂತಾರ ರಿಷಬ್ ಶೆಟ್ಟಿ ನಿರ್ದೇಶನದ ಮತ್ತು ನಟನೆಯ ಸಿನಿಮಾ. ಈ ಸಿನಿಮಾದ ಪ್ರೀಕ್ವೆಲ್ಗೆ ಇಂದು ಮಹೂರ್ತ ಫಿಕ್ಸ್ ಆಗಿದೆ. ಚಿತ್ರತಂಡವು ಕುಂದಾಪುರ ಆನೆಗುಡ್ಡೆ ವಿನಾಯಕ ದೇವಸ್ಥಾನವನ್ನು ಹೂವಿನಿಂದ ಸಿಂಗರಿಸಿದ್ದಾರೆ. ಜೊತೆಗೆ ಕುಂಭಾಸಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದೆ.