ಇತ್ತೀಚಿನ ದಿನಗಳಲ್ಲಿ ದೈವದ ಬಗ್ಗೆ ರೀಲ್ಸ್ ಮಾಡೋದು ಹೆಚ್ಚಾಗುತ್ತಿದೆ. ಅಲ್ಲದೆ ವೇದಿಕೆಗಳಲ್ಲೂ ದೈವದ ವೇಷ ಹಾಕಿ ನೃತ್ಯ ಮಾಡುತ್ತಿದ್ದಾರೆ. ಇಂತಹ ವೇಷಗಳು, ನೃತ್ಯಗಳು ಹಾಗೂ ರೀಲ್ಸ್ ಗಳನ್ನು ಮಾಡೋದರಿಂದ ದೈವಾರಾಧಕರಿಗೆ, ದೈವ ನರ್ತಕರಿಗೆ ಬೇಸರ ಆಗ್ತಾ ಇದೆ. ಇದರ ಬಗ್ಗೆ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ನಂದಿ ಅವಾರ್ಡ್ ಫಂಕ್ಷನ್ ನಲ್ಲಿ ಮಾತನಾಡಿದ ರಿಷಬ್ ಶೆಟ್ಟಿ, ‘ಕಾಂತಾರ ಚಿತ್ರ ಬಂದ್ಮೇಲೆ ಒಂದಷ್ಟು ಬೇಸರದ ಸಂಗತಿಗಳೂ ನಡೆದವು. ದೈವದ ರೀಲ್ಸ್ ಮಾಡೋರು ಹೆಚ್ಚಾಗಿದ್ದಾರೆ. ಅದರಿಂದ ದೈವವನ್ನ ನಂಬೋ ಜನರಿಗೆ, ದೈವವನ್ನ ಆರಾಧಿಸೋ ನರ್ತಕರಿಗೆ ಬೇಸರ ಕೂಡ ಆಗಿದೆ. ನನಗೆ ಇವರೆಲ್ಲ ಈ ಒಂದು ಸತ್ಯದ ಬಗ್ಗೆ ಹೇಳ್ತಾನೇ ಇದ್ದಾರೆ. ಹಾಗಾಗಿಯೇ ಈ ಒಂದು ವಿಚಾರವನ್ನು ಮಾಧ್ಯಮದ ಮೂಲಕ ತಿಳಿಸೋಕೆ ಇಷ್ಟಪಡುತ್ತೇನೆ. ಇದರಿಂದ ಇದು ಎಲ್ಲೋ ಒಂದು ಕಡೆಗೆ ಇಡೀ ಕಾಂತಾರ ಚಿತ್ರ ಉದ್ದೇಶಕ್ಕೆ ಕಪ್ಪು ಚುಕ್ಕಿ ಆಗುತ್ತಿದೆ ಅನಿಸುತ್ತಿದೆ. ಇದನ್ನ ಯಾರೂ ಮಾಡ್ಬೇಡಿ. ಇದರಿಂದ ಎಲ್ಲರಿಗೂ ಹರ್ಟ್ ಆಗುತ್ತದೆ’ ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ.
ರೀಲ್ಸ್ ಅನ್ನೋದು ಸದ್ಯದ ಅತಿ ದೊಡ್ಡ ಕಿಚ್ಚಾಗಿದೆ. ಇದರಿಂದ ಒಳ್ಳೆಯ ಎಂಜಾಯ್ ಮೆಂಟ್ ಸಿಗುತ್ತಿದೆ. ಆದರೆ ಇದರ ಎಫೆಕ್ಟ್ ಬೇರೆನೆ ಆಗ್ತಾ ಇದೆ. ಕಾಂತಾರ ದೈವದ ರೀಲ್ಸ್ ಮಾಡೋದರಿಂದಲೇ ತುಳುನಾಡ ದೈವಾರಾಧಕರಿಗೆ, ದೈವ ನರ್ತಕರಿಗೆ, ಬೇಸರ ಆಗುತ್ತದೆ. ನಾನು ಒಬ್ಬ ದೈವ ಭಕ್ತನೇ ಆಗಿದ್ದೇನೆ. ಇದು ನನಗೂ ಬೇಸರ ತರಿಸುತ್ತಿದೆ. ಚಿತ್ರದ ಮೂಲ ಉದ್ದೇಶ ದೈವದ ಶಕ್ತಿ ಮತ್ತು ಸಂಸ್ಕೃತಿಯನ್ನ ಎಲ್ಲೆಡೆ ಹೇಳೋದೇ ಆಗಿದೆ. ಆದರೆ ರೀಲ್ಸ್ ಅನ್ನೋದು ಎಲ್ಲೋ ಒಂದು ಕಡೆಗೆ ಕಪ್ಪು ಚುಕ್ಕೆ ಆಗುತ್ತದೆ ಎಂದು ನೊಂದು ಕೊಂಡು ಹೇಳಿದ್ದಾರೆ. ಕಾಂತಾರ ಚಿತ್ರದಲ್ಲಿ ದೈವಾರಾಧನೆ ಇದೆ. ಇದನ್ನ ಅಷ್ಟೆ ಗೌರವದಿಂದಲೇ ಮಾಡಿದ್ದೇವೆ. ದೈವ ನರ್ತಕರನ್ನ ಸಲಹೆ-ಸೂಚನೆಯಂತೆ ಚಿತ್ರೀರಿಸಿದ್ದೇವೆ. ಇಲ್ಲಿ ದೈವಕ್ಕೆ ಮಾಡಬೇಕಿರೋ ಎಲ್ಲ ಪಾವಿತ್ರ್ಯತೆಯನ್ನು ಅಚ್ಚುಕಟ್ಟಾಗಿಯೆ ಮಾಡಿದ್ದೇವೆ. ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಕಾಂತಾರ ಚಿತ್ರ ಮಾಡಿದ್ದೇವೆ ಎಂದಿದ್ದಾರೆ. ಚಿತ್ರಕ್ಕೆ ಬಂದ ಪ್ರಶಸ್ತಿಯನ್ನ ದೈವ ನರ್ತಕರಿಗೆ, ಕನ್ನಡಿಗರಿಗೆ, ಪವರ್ ಸ್ಟಾರ್ ಪುನೀತ್ ಅವರಿಗೆ ಅರ್ಪಿಸಿದ್ದಾರೆ ಎಂದರು. ಜೊತೆಗೆ ದೈವದ ರೀಲ್ಸ್ ಮಾಡ್ಬೇಡಿ ಅಂತಲೂ ರಿಕ್ವೆಸ್ಟ್ ಮಾಡಿದ್ದಾರೆ.