ಬಂಟಕಲ್ಲು : ಅಂಚೆ ಜನಸಂಪರ್ಕ ಅಭಿಯಾನ

ಬಂಟಕಲ್ಲು : ಅಂಚೆ ಜನ ಸಂಪರ್ಕ ಅಭಿಯಾನ ನಾಗರಿಕ ಸೇವಾ ಸಮಿತಿ ರಿ.ಬಂಟಕಲ್ಲು, ಭಾರತೀಯ ಅಂಚೆ ಇಲಾಖೆ ಉಡುಪಿ
ಇವರ ಆಶ್ರಯದಲ್ಲಿ ರೋಟರಿ ಕ್ಲಬ್ ಶಿರ್ವ, ಬಂಟರ ಸಂಘ ಶಿರ್ವ, ಲಯನ್ಸ್ ಕ್ಲಬ್ ಬಂಟಕಲ್ಲು- ಜಾಸ್ಮಿನ್ ಇವರ ಸಹಯೋಗದಲ್ಲಿ ಅಂಚೆ ಜನ ಸಂಪರ್ಕ ಅಭಿಯಾನ ಕಾರ್ಯಕ್ರಮದಡಿ ಆಧಾರ್ ನೊಂದಣಿ ಹಾಗೂ ತಿದ್ದುಪಡಿ, ಅಂಚೆ ಇಲಾಖೆಯ ಸಮೂಹ ಅಫಘಾತ ವಿಮೆ ನೊಂದಣಿ ಹಾಗೂ ಅಂಚೆ ಇಲಾಖೆಯ ಜನಸ್ನೇಹಿ ಸೇವೆಗಳ ಮಾಹಿತಿ ಕಾರ್ಯಕ್ರಮವು ಬಂಟಕಲ್ಲು ರೋಟರಿ ಭವನದಲ್ಲಿ ಜರುಗಿತು.



ಕಾರ್ಯಕ್ರಮವನ್ನು ಉಡುಪಿ ಅಂಚೆ ಅಧೀಕ್ಷಕರಾದ ರಮೇಶ್ ಪ್ರಭು ರವರು ದೀಪ ಬೆಳಗಿಸಿ ಉಧ್ಘಾಟಿಸಿ, ಇಲಾಖೆಯ ಜನಸ್ನೇಹಿ ಸೇವೆಗಳನ್ನು ಸಾರ್ವಜನಿಕರು ಪಡೆಯುವಂತೆ ತಿಳಿಸಿ, ಈ ಕಾರ್ಯಕ್ರಮವನ್ನು ಆಯೋಜಿಸಿರುವ ಸಂಘ ಸಂಸ್ಥೆಗಳನ್ನು ಅಭಿನಂದಿಸಿದರು.

ಅಂಚೆ ಇಲಾಖೆ ಉಪ ಅಧೀಕ್ಷಕ ಕೃಷ್ಣರಾಜ ಭಟ್ ರವರು ಅಂಚೆ ಇಲಾಖೆಯ ವಿವಿಧ ಜನ ಸ್ನೇಹಿ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮಕ್ಕೆ ಸಹಯೋಗ ನೀಡಿದ ಶಿರ್ವ ಬಂಟರ ಸಂಘದ ಅಧ್ಯಕ್ಷ ವಿರೇಂದ್ರ ಶೆಟ್ಟಿ, ಬಂಟರ ಸಂಘದ ಮಹಿಳಾ ಅಧ್ಯಕ್ಷೆ ಜಯಶ್ರೀ ಶೆಟ್ಟಿ, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್ ಅಧ್ಯಕ್ಷೆ ಲ ಪ್ರಮೀಳಾ ಲಸ್ರಾದೊ ಮಾತನಾಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಂಟಕಲ್ಲು ನಾಗರಿಕ ಸೇವಾ ಸಮಿತಿ ಅದ್ಯಕ್ಷ ಕೆ ಆರ್ ಪಾಟ್ಕರ್ ಪ್ರಾಸ್ತವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿ ಸರ್ವರನ್ನೂ ಸ್ವಾಗತಿಸಿದರು.


ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಹೊಸ ಆಧಾರ್ ನೊಂದಣಿ, ಆಧಾರ್ ತಿದ್ದುಪಡಿ ಹಾಗೂ ಅಂಚೆ ಇಲಾಖೆಯ ಅಫಘಾತ ವಿಮೆಯ ನೊಂದಣಿಯು ನಡೆಯಿತು. ನೂರಕ್ಕೂ ಅಧಿಕ ಸಾರ್ವಜನಿಕರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ನಾಗರಿಕ ಸೇವಾ ಸಮಿತಿ ಉಪಾಧಕ್ಷ ಪಂಡಲೀಕ ಮರಾಠೆ, ಸದಸ್ಯರಾದ ಡೇನಿಸ್, ವಿನ್ಸಂಟ್, ವೈಲೆಟ್ ಕಸ್ತಲಿನೊ, ಬಂಟರ ಸಂಘದ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಲಯನ್ಸ್ ಕ್ಲಬ್ ಸದಸ್ಯರು, ಅಂಚೆ ಇಲಾಖೆ ಸಿಬ್ಬಂಧಿ ಉಪಸ್ಥಿತರಿದ್ದರು.
ವಿರೇಂದ್ರ ಪಾಟ್ಕರ್ ಪ್ರಾರ್ಥಿಸಿದರು, ಶಿರ್ವ ರೋಟರಿ ಕ್ಲಬ್ ಕಾರ್ಯದರ್ಶಿ ವಿಷ್ಣುಮೂರ್ತಿ ಸರಳಾಯ ವಂದಿಸಿದರು ಲಯನ್ ಅನಿತಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು,

Scroll to Top