ಕಾಂತಾರ ಪ್ರೀಕ್ವೆಲ್ನಲ್ಲಿ ನಟಿಸಬೇಕಾ? ರಿಷಬ್ ಶೆಟ್ಟಿ ಕೊಡ್ತಿದ್ದಾರೆ ಹೀಗೊಂದು ಅವಕಾಶ.. ಟ್ರೈ ಮಾಡಿ

ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಕಾಂತಾರ ಪ್ರೀಕ್ವೆಲ್ ಸಿನಿಮಾ ತಂಡದ ಕಡೆಯಿಂದ ಬಂಪರ್ ಅವಕಾಶವೊಂದು ಹೊರಬಿದ್ದಿದೆ. ನಟನೆಯಲ್ಲಿ ಆಸಕ್ತಿ ಇರುವವರು ಮತ್ತು ಕಾಂತಾರ ಸಿನಿಮಾದಲ್ಲಿ ನಟಿಸಲು ಆಸಕ್ತಿ ಇರುವವರಿಗಾಗಿ ಅವಕಾಶವನ್ನು ನೀಡುತ್ತಿದೆ. ಅದಕ್ಕಾಗಿ ಆಡಿಷನ್ ಕೂಡ ಕರೆದಿದೆ.

ಹೌದು.ಪ್ಯಾನ್ ಇಂಡಿಯಾ ಕಾಂತಾರ ಚಿತ್ರತಂಡ ಕಲಾವಿದರ ಆಡಿಷನ್ ಕರೆದಿದ್ದು, ನಿಮ್ಮಲ್ಲಿ ನಟಿಸುವ ಆಸಕ್ತಿ ಇದ್ದರೆ ನೀವು ಕಾಂತಾರ ತಂಡದ ಭಾಗಿಯಾಗಬಹುದು ಎಂದು ಹೇಳಿದೆ. ಪೋಷಕ ಪಾತ್ರಗಳಿಗಾಗಿ ನಟ-ನಟಿಯರು ಬೇಕಾಗಿದ್ದಾರೆ ಎಂದಿದೆ.

30 ರಿಂದ 60 ವರ್ಷದ ಪುರುಷ ಕಲಾವಿದರು. 18 ರಿಂದ 60 ವರ್ಷದ ಮಹಿಳಾ ಕಲಾವಿದರಿಗೆ ನಟಿಸುವ ಅವಕಾಶವನ್ನು ಕಾಂತಾರ ತೆರೆದಿಟ್ಟಿದೆ. ಡಿಸೆಂಬರ್ 14ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ.




ಅಂದಹಾಗೆಯೇ, ರಿಷಬ್ ಕಾಂತಾರ ಪ್ರೀಕ್ವೆಲ್ ಅನ್ನು ಜನರ ಮುಂದಿರಿಸಲು ಮುಂದಾಗಿದ್ದಾರೆ. ಹೀಗಾಗಿ ಭಾರೀ ಕುತೂಹಲತೆ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಇತ್ತೀಚೆಗೆ ಈ ಸಿನಿಮಾದ ಫಸ್ಟ್ಲುಕ್ ರಿಲೀಸ್ ಮಾಡಿತ್ತು. ಅದರಲ್ಲಿ ರಿಷಬ್ ಒಂದು ಕೈಯಲ್ಲಿ ತ್ರಿಶೂಲ, ಮತ್ತೊಂದು ಕೈಯಲ್ಲಿ ಕೊಡಲಿ ಹಿಡಿದುಕೊಂಡು ನಿಂತಿದ್ದರು. ಮಾತ್ರವಲ್ಲದೆ, ಕೊರಳಲ್ಲಿ ರುದ್ರಾಕ್ಷಿ ಮಾಲೆಯನ್ನು ಧರಿಸಿರುವುದು ಕಾಂತಾರ 1 ಫಸ್ಟ್ ಲುಕ್ ಪೋಸ್ಟರ್ನಲ್ಲಿ ಕಾಣಿಸಿತ್ತು.

You cannot copy content from Baravanige News

Scroll to Top