ಉಡುಪಿ: ಮದುವೆ ಮಂಟಪದಲ್ಲೇ ವಧು ವರರಿಂದ ಕೋಳಿ‌ ಅಂಕ

ಉಡುಪಿ : ವಧು ವರರ ಪ್ರಿ ವೆಡ್ಡಿಂಗ್- ಪೋಸ್ಟ್ ವೆಡ್ಡಿಂಗ್ ನ ಡಿಫರೆಂಟ್ ಕಾನ್ಸೆಪ್ಟ್ ಗಳು ಆಗಾಗ ಸುದ್ದಿಯಾಗುತ್ತಿರುತ್ತದೆ.

ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ನಡೆದ ಮಿಥುನ್ ಮತ್ತು ಪೂಜಾ ಮದುವೆ ಸಮಾರಂಭದಲ್ಲಿ ಡಿಫರೆಂಟ್ ಕಾನ್ಸೆಪ್ಟ್ ಗಳನ್ನು ಗೆಳೆಯರು ಅರೇಂಜ್ ಮಾಡಿದ್ದರು.


ವರ ಮತ್ತು ವಧು ಜೆಸಿಬಿಯಲ್ಲಿ ಮದುವೆ ಹಾಲ್ ಗೆ ಬಂದು ಗಮನ ಸೆಳೆದರು.

ಜೆಸಿಬಿಯನ್ನು ಹೂವಿನಿಂದ ಸಿಂಗಾರ ಮಾಡಿ, ಸ್ಪೆಷಲ್ ಸೋಫಾವನ್ನು ಮುಂಭಾಗಕ್ಕೆ ಜೊಡಿಸಿ ಅದರಲ್ಲಿ ವರವಧು ಕುಳಿತು ಮದುವೆ ಹಾಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟಕ್ಕೆ ಮುಗಿದಿಲ್ಲ, ಮದುವೆ ಮಂಟಪದಲ್ಲಿ ಮದುಮಗ ಮತ್ತು ಮದುಮಗಳಿದ ಕೋಳಿ ಅಂಕದ ಪ್ರಾತ್ಯಕ್ಷಿಕೆ ನಡೆದಿದೆ. ಮಿಥುನ್ ಮತ್ತು ಪೂಜಾ ಅಂಕದ ಕೋಳಿಗಳನ್ನು ಫೈಟ್ ಮಾಡಿಸಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

You cannot copy content from Baravanige News

Scroll to Top