ದೇಶದಲ್ಲಿ ಸಂಚಲನ ಮೂಡಿಸಿದ್ದ ಆನ್ಲೈನ್ ಬೆಟ್ಟಿಂಗ್ ಕೇಸ್ ; ಮಹದೇವ ಬೆಟ್ಟಿಂಗ್ ಆ್ಯಪ್ ಮಾಲೀಕ ದುಬೈನಲ್ಲಿ ಅರೆಸ್ಟ್..!

ಮಹದೇವ ಬೆಟ್ಟಿಂಗ್ ಆ್ಯಪ್ ಮಾಲೀಕ ರವಿ ಉಪ್ಪಳ್ ಅವರ ಬಂಧನವಾಗಿದೆ. ದುಬೈನಲ್ಲಿ ಸ್ಥಳೀಯ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ.

ರವಿ ಉಪ್ಪಳ್ ಬಂಧನದ ಕುರಿತು ಇ.ಡಿ.ಮನವಿ ಮಾಡಿತ್ತು. ಮನವಿ ಮೇರೆಗೆ ಇಂಟರ್ ಪೋಲ್ ರೆಡ್ ಕಾರ್ನರ್ಗೆ ನೋಟೀಸ್ ಹೊರಡಿಸಿತ್ತು. ಇಂಟರ್ ಪೋಲ್ ನೆರವಿನಿಂದ ದುಬೈನಲ್ಲಿ ರವಿ ಉಪ್ಪಳ್ ಬಂಧನವಾಗಿದೆ.

ಮಹದೇವ ಬೆಟ್ಟಿಂಗ್ ಆ್ಯಪ್ ನ ಇಬ್ಬರು ಮಾಲೀಕರ ಪೈಕಿ ರವಿ ಉಪ್ಪಳ್ ಕೂಡ ಒಬ್ಬರಾಗಿದ್ದು, ಸೌರಭ್ ಚಂದ್ರಕರ್ ಮತ್ತೊಬ್ಬ ಬೆಟ್ಟಿಂಗ್ ಆ್ಯಪ್ ಮಾಲೀಕ. ಸದ್ಯ ದುಬೈನಿಂದ ರವಿ ಉಪ್ಪಳ್ನನ್ನು ಭಾರತಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

ಇನ್ನು ರವಿ ಉಪ್ಪಳ್, ಸೌರಭ್ ಚಂದ್ರಕರ್ ಮೇಲೆ ಇ.ಡಿ ಆಕ್ರಮ ಹಣ ವರ್ಗಾವಣೆ ಕೇಸ್ ದಾಖಲಿಸಿದೆ. ಆ್ಯಪ್ ಮೂಲಕ ಆನ್ ಲೈನ್ ಬೆಟ್ಟಿಂಗ್ ನಡೆಸಿ ಆಕ್ರಮ ಹಣ ಸಂಗ್ರಹ, ವರ್ಗಾವಣೆ ಮಾಡಿದ ಆರೋಪ ಇಬ್ಬರ ಮೇಲಿದೆ. ಈ ಕಾರಣಕ್ಕೆ ದುಬೈನಲ್ಲಿ ತಲೆಮರೆಸಿಕೊಂಡಿದ್ದ ರವಿ ಉಪ್ಪಳ್ ಬಂಧನವಾಗಿದೆ.

You cannot copy content from Baravanige News

Scroll to Top