ಪುತ್ತೂರು, ಡಿ.13: ಪುತ್ತೂರಿನಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಮೂಲದ ಹನುಮಂತ ಮಾದರ್ ರವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಬಾದಾಮಿ ದಾಣಕಶಿರೂರ್ ನಿವಾಸಿ ಶಿವಪ್ಪ ಹನುಮಂತ ಮಾದರ್, ಮಂಜುನಾಥ ಮಾದರ್, ದುರ್ಗಪ್ಪ ಮಾದರ್ ಬಂಧಿತರು.
ಆರೋಪಿಗಳು ಜೊತೆ ಸೇರಿಕೊಂಡು ಹನುಮಂತನನ್ನು ಅಪಹರಿಸಿಕೊಂಡು ಹೋಗಿ, ದಾರಿಮಧ್ಯೆ ಕೊಲೆ ಮಾಡಿ ಆಗುಂಬೆ ಕಾಡಿಗೆ ಬಿಸಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ನಂತರ ಆರೋಪಿಗಳು ಆಗುಂಬೆ ಘಾಟಿಯಲ್ಲಿ ಮೃತದೇಹವನ್ನು ಬಿಸಾಡಿರುವ ಜಾಗವನ್ನು ತೋರಿಸಿಕೊಟ್ಟಿದ್ದು, ಆಗುಂಬೆ ಘಾಟಿಯ 13 ನೇ ತಿರುವಿನಲ್ಲಿ ಕೊಲೆಯಾದ ಹನುಮಂತನ ಮೃತ ದೇಹವು ಕೊಳೆತ ರೀತಿಯಲ್ಲಿ ಪತ್ತೆಯಾಗಿರುತ್ತದೆ.
ಈ ಪ್ರಕರಣದ ಎರಡನೇ ಆರೋಪಿ ದುರ್ಗಪ್ಪ ಮಾದರ ಎಂಬಾತನನ್ನು ವಿಶೇಷ ತಂಡವು ಡಿ.12 ರಂದು ಬಂಧಿಸಿ., ಪ್ರಕರಣಕ್ಕೆ ಉಪಯೋಗಿಸಿದ ವಾಹನವನ್ನು ವಶಪಡಿಸಿಕೊಂಡಿರುತ್ತಾರೆ.
ಈ ಕೊಲೆ ಪ್ರಕರಣಕ್ಕೆ ಶಿವಪ್ಪ ಹನುಮಂತ ಮಾದರ್ ರವರ ಪತ್ನಿಗೆ ಮತ್ತು ಕೊಲೆಯಾದ ಹನುಮಂತನಿಗೂ ಅನೈತಿಕ ಸಂಬಂಧ ಇದ್ದು, ಇದೇ ಕಾರಣಕ್ಕೆ ಹನುಮಂತನನ್ನು ಅಪಹರಿಸಿ ಕೊಲೆ ಮಾಡಿರುವುದಾಗಿ ಆರೋಪಿತರು ತಪ್ಪೊಪ್ಪಿಕೊಂಡಿರುತ್ತಾರೆ.
ಈ ಪೂರ್ವ ಯೋಜಿತ ಕೃತ್ಯದಂತೆ ಕಂಡು ಬರುವ ಪ್ರಕರಣವನ್ನು ಪುತ್ತೂರು ತಾಲೂಕು ಕುಂಬ್ರದಿಂದ ಅಪಹರಿಸಿ ಕೊಲೆ ಮಾಡಿ ಉಡುಪಿ ಜಿಲ್ಲೆ ಹೆಬ್ರಿ ತಾಲೂಕು ಆಗುಂಬೆ ಘಾಟಿಯ 13ನೇ ತಿರುವಿನಲ್ಲಿ ಶವವನ್ನು ಬಿಸಾಕಿರುವ ಪ್ರಕರಣದಲ್ಲಿ ಆರೋಪಿತರು ಯಾವುದೇ ಸುಳಿವು ಬಿಡದೇ ತಲೆ ಮರಸಿಕೊಂಡಿದ್ದು, ಪ್ರಕರಣವನ್ನು ಬೇಧಿಸುವಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ತಂಡ ಎರಡು ವಾರಗಳಲ್ಲಿ ಹಗಲು ರಾತ್ರಿ ನಿರಂತರವಾಗಿ ಪ್ರಯಾಣಿಸಿ ಮಾಹಿತಿ ಸಂಗ್ರಹಿಸಿರುತ್ತಾರೆ.
ಈ ಪ್ರಕರಣವನ್ನು ಬೇಧಿಸುವಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಿಷ್ಯಂತ್ ಸಿ.ಬಿ ಮತ್ತು ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎಮ್ ಎನ್ ರವರ ನಿರ್ದೇಶನದಲ್ಲಿ ಪುತ್ತೂರು ಉಪಾಧೀಕ್ಷಕರಾದ ಅರುಣ್ ನಾಗೇ ಗೌಡ ರವರ ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ ಬಿಎಸ್ ರವರ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ಕೆ ಅಕ್ಷಯ್ ಡವಗಿ ಎಎಸ್ಕೆ ಮುರುಗೇಶ್ ಬಿ. ಶ್ರೀಧರ ರೈ ಸಿಬ್ಬಂದಿಯವರಾದ ಅದ್ರಾಮ, ಹರೀಶ್ ಜಿ.ಎನ್. ಸಲೀಂ, ಪ್ರವೀಣ್ ರೈ, ದಯಾನಂದ, ವಸಂತ ಗೌಡ, ಸತೀಶ್ ಎನ್. ಮುನಿಯಾ ನಾಯ್ಕ, ನಾಗೇಶ್ ಕೆ.ಸಿ. ಜಗದೀಶ್ ಅತ್ತಾಜೆ ಚಾಲಕರಾಗಿ ಯೋಗೀಶ್ ನಾಯ್ಕ, ಹರೀಶ್ ನಾಯ್ಕ ಪ್ರವೀಣ್ ಹಾಗೂ ಜಿಲ್ಲಾ ಗಣಕಂತ್ರ ವಿಭಾಗದ ದಿವಾಕರ್ ಮತ್ತು ಸಂಪತ್ ರವರು ಸಹಕರಿಸಿರುತ್ತಾರೆ.