ಬೆಂಗಳೂರು: ಕೆಲವೊಮ್ಮೆ ಹೀಗೂ ಆಗುತ್ತದೆ ಎನ್ನುವುದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಸ್ವಾರಸ್ಯಕರವಾದ ವಿಷಯವಿದೆ. ನಗರದ ಹೊಸೂರು ಮೇನ್ ರೋಡ್ನಲ್ಲಿರುವ ನಾಯ್ಡು ಹೋಟೆಲ್ನ ಚಾಟ್ ಮೆನು ಬೋರ್ಡ್ನಲ್ಲಿ ದೊಡ್ಡ ಹಾಸ್ಯವೊಂದು ನಡೆದು ಹೋಗಿದೆ. ಇದಕ್ಕೆ ಕರೆಕ್ಟ್ ಆಗಿ ತಂತ್ರಜ್ಞಾನದ ಎಡವಟ್ಟು ಎಂದರೆ ತಪ್ಪಾಗಲಾರದು.
ನೂಡಲ್ಸ್, ಮಂಚುರಿ, ಫ್ರೈಡ್ ರೈಸ್, ಕಬಾಬ್ ಎಂದರೆ ಯಾರಿಗೆ ಇಷ್ಟ ಇರಲ್ಲ. ಈ ಮಾತು ಕೇಳುತ್ತಿದ್ದಂತೆ ಈಗಾಗಲೇ ಬಾಯಿಯಲ್ಲಿ ನೀರು ಬರುತ್ತಿರಬಹುದು. ಆದರೆ ಈ ಎಲ್ಲ ಆಹಾರಗಳು ನಾಯಿದ್ದು ಆಗಿದ್ದರೇ ಹೆಂಗೆ. ಇಂತಹದೊಂದು ಯೋಚನೆ ನಾಯ್ಡು ಹೋಟೆಲ್ನ ಬೋರ್ಡ್ನಿಂದ ಬಂದಿರುವುದು ಅಚ್ಚರಿ ಮೂಡಿಸಿದೆ.
ನಾಯ್ಡು ಹೋಟೆಲ್ನ ಮುಂಭಾಗದಲ್ಲಿ ಬೋರ್ಡ್ ಅನ್ನು ಹಾಕಲಾಗಿದೆ. ಇದರಲ್ಲಿ ಇಂಗ್ಲಿಷ್ನಲ್ಲಿ Naidu Noodles ಎಂದು ಸರಿಯಾಗಿದೆ. ಆದರೆ ಕನ್ನಡದಲ್ಲಿ ಟ್ರಾನ್ಸ್ಲೇಟ್ ಮಾಡುವಾಗ ‘ನಾಯಿದು ನೂಡಲ್ಸ್’ ಎಂದು ಮಾಡಿ, ಅದನ್ನು ಹಾಗೇ ಬೋರ್ಡ್ನಲ್ಲಿ ಹಾಕಿದ್ದಾರೆ. ಇದೇ ರೀತಿ ನೂಡಲ್ಸ್ ಚಾಟ್ ಕೆಳಗಡೆ ನಾಯ್ಡು ಫ್ರೈಡ್ ರೈಸ್ ಹೋಗಿ ‘ನಾಯಿದು ಪ್ರೈಡ್ ರೈಸ’ ಅಂತ, ನಾಯ್ಡು ಮಂಚುರಿಯನ್ನ ‘ನಾಯಿದು ಮಂಚುರಿ’ ಎಂದು ತಪ್ಪಾಗಿ ಬರೆದಿದ್ದಾರೆ. ಇದೆಲ್ಲ ಬಿಡಿ ಕಬಾಬ್ ಕಥೆ ಮಾತ್ರ ನಾಯ್ಡು ಕಬಾಬ್ ಹೋಗಿ, ‘ನಾಯಿ ಕಬಾಬ’ ಆಗೋಗಿದೆ. ಒಟ್ಟಿನಲ್ಲಿ ಈ ಬೋರ್ಡ್ನಲ್ಲಿರೋದೆಲ್ಲ ತಪ್ಪು ಎಂದು ಹೇಳಬಹುದು.