ನವದೆಹಲಿ : ಮುಟ್ಟು ಅಂಗವೈಕಲ್ಯವನ್ನು ಪ್ರದರ್ಶಿಸುವುದಿಲ್ಲ. ಸಹಜ ಪ್ರಕ್ರಿಯೆ ಹೀಗಾಗಿ ವೇತನ ಸಹಿತ ಮುಟ್ಟಿನ ರಜೆ ನೀಡುವ ಪ್ರಸ್ತಾಪವೇ ಇಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿಕೆ ನೀಡಿದ್ದಾರೆ.
ಸ್ಮೃತಿ ಇರಾನಿ ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಮಹಿಳೆಗೆ ಮುಟ್ಟು ಎಂಬುದು ಎಂದೂ ಕೆಲಸಕ್ಕೆ ಅಡ್ಡಿ ಮಾಡಿಲ್ಲ. ಅದು ಆಕೆಯ ಜೀವನ ಪಯಣದ ಒಂದು ಭಾಗವಾಗಿರುತ್ತದೆ.
ದುಡಿಯುವ ಮಹಿಳೆ ಮುಟ್ಟಿನ ಹೆಸರಿನಲ್ಲಿ ರಜೆ ಹಾಕುವುದು ಅರ್ಥಹೀನ, ಇದೀಗ ಮಹಿಳೆಗೂ ಸಮಾನ ಹಕ್ಕು ಬೇಕೆಂದು ಹೋರಾಟ ನಡೆಯುತ್ತಿರುವ ಸಮಯದಲ್ಲಿ ಈ ರಜೆಯು ತಾರತಮ್ಯಕ್ಕೆ ಕಾರಣವಾಗಬಹುದು. 10-19 ವಯೋಮಾನದ ಬಾಲಕಿಯರಲ್ಲಿ ಮುಟ್ಟಿನ ನೈರ್ಮಲ್ಯವನ್ನು ಉತ್ತೇಜಿಸಲು ಕೇಂದ್ರವು ಈಗಾಗಲೇ ಯೋಜನೆಯನ್ನು ಜಾರಿಗೊಳಿಸುತ್ತಿದೆ ಎಂದಿದ್ದಾರೆ. ಈ ಮಾತಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ದನಿಗೂಡಿದ್ದಾರೆ.