ಫೇಸ್ ಬುಕ್ ನಲ್ಲಿ ಹುಡುಗಿ ಹೆಸರು ಬಳಸಿ ಮೆಸೇಜ್ : ಪ್ರೀತಿ ಮಾತಿಗೆ ಮರುಳಾಗಿ 6 ಲಕ್ಷ ಕಳೆದುಕೊಂಡ ಯುವಕ..!

ಶಿವಮೊಗ್ಗ : ಫೇಸ್ ಬುಕ್ ನಲ್ಲಿ ಹುಡುಗಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಯುವಕನೋರ್ವನಿಗೆ ಸುಮಾರು 6.87 ಲಕ್ಷ ರೂ. ಗಳನ್ನು ವಂಚಿಸಿದ ವ್ಯಕ್ತಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ಇದ್ದವರೂ ಕೂಡ ಪರಿಚಯವಾಗುತ್ತಾರೆ. ಕೊನೆಗೆ ಆತ್ಮೀಯರಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಜಿಕ ಜಾಲತಾಣವಾದ ಇನ್ಸ್ಟಾಗ್ರಾಂ, ಹಾಗೂ ಫೇಸ್ ಬುಕ್ ನಿಂದ ಅತೀ ಹೆಚ್ಚು ಜನ ಪರಿಚಯವಾಗುತ್ತಾರೆ. ಹೆಚ್ಚು ಆತ್ಮೀಯರಾದರೆ ಕೊನೆಗೆ ಮೂರುನಾಮ ಇಟ್ಟು ಹೋಗುತ್ತಾರೆ. ಹಾಗಾಗಿ ಸೋಷಿಯಲ್ ಮೀಡಿಯಾ ಬಳಸುವ ಮುನ್ನ ಎಚ್ಚರಿಕೆ ವಹಿಸಲೇಬೇಕು. ಯಾಕಂದರೆ ಶಿವಮೊಗ್ಗದಲ್ಲಿ ಸೋಷಿಯಲ್ ಮೀಡಿಯಾದಿಂದ ವಂಚನೆಗೊಳಗಾದ ವ್ಯಕ್ತಿ ಹಣ ಕಳೆದುಕೊಂಡ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆರೋಪಿ ಸುಜೇಂದ್ರ (21) ಎಂಬಾತ ಸಿರಾ ಪಟ್ಟಣದ ವಿದ್ಯಾನಗರದ ನಿವಾಸಿ ಭರತ್‌ಕುಮಾರ್ ಎಂಬಾತನ ಜತೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ಶಿಪ್ ಮಾಡಿಕೊಂಡಿದ್ದ.

ಆರೋಪಿ ಸುಜೇಂದ್ರ ಫೇಸ್‌ಬುಕ್‌ನಲ್ಲಿ ಹುಡುಗಿಯ ಹೆಸರಲ್ಲಿ ನಕಲಿ ಖಾತೆ ರಚಿಸಿ ಅದರಲ್ಲಿ ಹುಡುಗಿಯ ಫೋಟೊ ಹಾಕಿ ಹುಡುಗಿಯಂತೆ ವರ್ತಿಸುತ್ತಿದ್ದ. ಆತ ಶರ್ಮಿಳ ಮತ್ತು ದಿವ್ಯ ಎಂಬ ಎರಡು ಹೆಸರಿನಲ್ಲಿ ಕಾತೆ ಕ್ರೀಯೆಟ್ ಮಾಡಿ ಮೆಸೇಜ್ ಮಾಡುತ್ತಿದ್ದನು. ಬಳಿಕ ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ್ದಾನೆ. ಇದಾದ ಬಳಿಕ ಕೆಲವು ದಿನಗಳ ನಂತರ ಆರೋಪಿ ನನಗೆ ಕಷ್ಟ ಇದೆ ಎಂದು ಹೇಳಿ ಆತನ ನಂಬಿಸಿ ಹಣವನ್ನು ಫೋನ್ ಪೇ, ಪೇಟಿಎಂ, ಗೂಗಲ್ ಪೇ ಹಾಗೂ ಬ್ಯಾಂಕ್ ಖಾತೆಗಳಿಗೆ ಹಾಕಿಸಿಕೊಂಡು ವಂಚಿಸಿದ್ದಾರೆ.

ಸುಮಾರು 6.87 ಲಕ್ಷ ರೂ. ಗಳನ್ನು ವಂಚಿಸಿದ್ದಾನೆ. ಹಣ ಕಳೆದುಕೊಂಡ ಯುವಕ ವಿದ್ಯಾರ್ಥಿಯಾಗಿದ್ದು, ಆತನ ತಂದೆ ಆತನ ತಂದೆ ಶಾಂತಕುಮಾರ್ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಡಿ. 12ರಂದು ಶಿವಮೊಗ್ಗ ನಗರ, ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ ಟೌನ್ ನಿವಾಸಿ ಸುಜೇಂದ್ರ ಎಂ.ಬಿ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳ ಬಂಧನಕ್ಕೆ ತನಿಖೆ ಮುಂದುವರಿದಿದೆ. ವಿಚಾರಣೆ ವೇಳೆ ಆರೋಪಿ ತಾನು ಆನ್‌ಲೈನ್ ಜೂಜಾಟದ ಚಟ ಹೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಂತ್ರಸ್ತನಿಂದ ಪಡೆದಿದ್ದ ಹಣವನ್ನು ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ. ಸಿಇಎನ್ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ ನೇತೃತ್ವದ ತಂಡ ತನಿಖೆ ಕೈಗೊಂಡಿದೆ.

You cannot copy content from Baravanige News

Scroll to Top