ಪಾಪದ ಅತ್ತೆ ಮೇಲೆ ಸೊಸೆಯ ದರ್ಪ.. ಮಂಚದ ಮೇಲೆ ಕುಳಿತ್ತಿದ್ದಾಗ ತಳ್ಳಿ ಹಾಕಿದ ಶೂರ್ಪನಕಿ

ಕೇರಳ : ಎಲ್ಲರ ಮನೆ ದೊಸೆ ತೂತು ಅನ್ನೋ ಹಾಗೇ ಸಾಮನ್ಯವಾಗಿ ಎಲ್ಲರ ಮನೆಯಲ್ಲೂ ಅತ್ತೆ ಸೊಸೆ ನಡುವೆ ಜಗಳ ಇದ್ದೇ ಇರುತ್ತೆ. ಆ ಜಗಳ ಮಾನವೀಯತೆಯನ್ನ ಮರೆಯಬಾರದು. ಆದರೆ, ಕೇರಳದಲ್ಲೊಬ್ಬಳು ಸೊಸೆ, ಅತ್ತೆಯೂ ಒಬ್ಬಳು ಹೆಣ್ಣು ಅನ್ನೋದು ಮರೆತ್ತಿದ್ದಾಳೆ. ತನಗಿಂತ ಹಿರಿಯರಾದ ಅತ್ತೆ ಮೇಲೆ ದರ್ಪ ತೋರಿಸಿದ್ದಾಳೆ. ಈ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೊರಗಡೆ ಬಂದು ಕುಳಿತ್ತಿದ್ದ 80 ವರ್ಷದ ಅತ್ತೆಗೆ ಒಳಗೆ ಹೋಗುವಂತೆ ಬೈದು ಕೊನೆಗೆ ಅಮಾನುಷವಾಗಿ ತಳ್ಳಿದ್ದಾಳೆ. ಅಷ್ಟೇ ಅಲ್ಲ ಚಿಕ್ಕ ಮಗುವಿನ ಕೈಯಲ್ಲೂ ಅಜ್ಜಿಗೆ ಬೈಯಿಸಿರೋದಷ್ಟೇ ಅಲ್ಲ, ಹೊಡೆಸಿದ್ದಾಳೆ. ಅಲ್ಲದೆ, ಹಾಕಿದ್ದ ಟಾಪ್ ಎತ್ತಿ ವಿಕೃತವಾಗಿ ಮೆರೆದಿದ್ದಾಳೆ.

ಅಂದಹಾಗೆಯೇ, ಅತ್ತೆಯ ಜೊತೆಗೆ ಸೊಸೆ ಕ್ರೌರ್ಯವಾಗಿ ವರ್ತಿಸಿರೋದು ಕೇರಳದ ಕೊಲ್ಲಂ ಎಂಬಲ್ಲಿ. ಈ ವಿಡಿಯೋ ಎಲ್ಲೆಡೆ ಹರಿದಾಡ್ತಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ. ಸೊಸೆಯನ್ನ ಬಂಧಿಸಿ ಶಿಕ್ಷೆ ಕೊಡುವಂತೆ ಆಗ್ರಹಿಸಿದ್ದರು. ತಕ್ಷಣ ಅಲರ್ಟ್ ಆದ ಪೊಲೀಸರು ಮಂಜುಮೋಳ್ ವರ್ಗೀಸ್ ಅನ್ನೋ ಸೊಸೆಯನ್ನ ಅರೆಸ್ಟ್ ಮಾಡಿದ್ದಾರೆ.

You cannot copy content from Baravanige News

Scroll to Top