ಗಂಡನನ್ನು ಬಿಟ್ಟು ಪ್ರೇಮಿ ಹಿಂದೆ ಓಡಿದ 3 ಮಕ್ಕಳ ತಾಯಿಗೆ ಕೈ ಕೊಟ್ಟ ಪ್ರಿಯತಮ – ಕರ್ಮ ರಿಟರ್ನ್

ಬಂಟ್ವಾಳ: ಎರಡು ಮಕ್ಕಳ ತಾಯಿಯನ್ನು ಮದುವೆಯಾಗುವುದಾಗಿ ನಂಬಿಸಿ ಗಂಡನಿಂದ ಬಿಡಿಸಿ ಬಳಿಕ ಆಕೆಯನ್ನು ಬಾಡಿಗೆ ಮನೆಯಲ್ಲಿಟ್ಟು ದೈಹಿಕ ಸಂಪರ್ಕ ಬೆಳೆಸಿ ಇದೀಗ ಆಕೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಪಾಣೆಮಂಗಳೂರಿನಲ್ಲಿ ನಡೆದಿದೆ.



ನರಿಕೊಂಬು ನಿವಾಸಿ ತಸ್ಲಿಂ ಆರೀಫ ಪ್ರಕರಣದ ಆರೋಪಿಯಾಗಿದ್ದು, ಆತನ ವಿರುದ್ಧ ಲೊರೆಟ್ಟೊ ನಿವಾಸಿ ಅಬ್ದುಲ್‌ ಅಜೀಜ್‌ ಪತ್ನಿ ಅನೀಶಾ ಬಾನು ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಆರೀಫನು ಅಬ್ದುಲ್‌ ಅಜೀಜ್‌ನ ಸ್ನೇಹಿತನಾಗಿದ್ದು, ಹೀಗಾಗಿ ಮನೆಗೆ ಬಂದು ಹೋಗುತ್ತಿದ್ದ. ಹೀಗಾಗಿ ಆರೀಫನಿಗೂ ಅಜೀಜ್‌ ಪತ್ನಿ ಅನೀಶಾ ಬಾನುವಿಗೂ ಸ್ನೇಹ ಬೆಳೆದಿತ್ತು. ಬಳಿಕ ಆತ ಅಜೀಜ್‌ ಇಲ್ಲದ ವೇಳೆ ಮನೆಗೆ ಹೋಗಿ ಅನೀಶಾ ಬಾನು ಜತೆ ದೈಹಿಕ ಸಂಪರ್ಕ ಬೆಳೆಸುತ್ತಿರುವ ಜತೆಗೆ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದ. ಈ ವಿಚಾರ ತಿಳಿದು ಪತಿ ಆಕೆಯನ್ನು ಮನೆಯಿಂದ ಹೊರ ಹಾಕಿದ್ದನು. ಬಳಿಕ ಆರೋಪಿಯು ಆಕೆಯನ್ನು ಪಾಣೆಮಂಗಳೂರಿನ ಜೈನರಪೇಟೆಯಲ್ಲಿ ಬಾಡಿಗೆ ಮನೆಯಲ್ಲಿರಿಸಿಕೊಂಡಿದ್ದನು.

ಇದೀಗ ಆರೋಪಿಯು ಆಕೆಯ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top