ಮಧ್ಯಪ್ರದೇಶ : ಸಾವು ನಿಶ್ಚಯ. ಹುಟ್ಟಿದ ವ್ಯಕ್ತಿ ಯಾವಾಗಲಾದರು ಸಾಯಲೇಬೇಕು. ಹಾಗಂತ ಮನೆಯವರೊಂದಿಗೆ ಹೋಟೆಲ್ ತೆರಳಿ ಆಹಾರ ಸೇವಿಸುವ ವ್ಯಕ್ತಿಗೆ ಹಠಾತ್ ಸಾವು ಎಂದರೆ ಹೇಗೆ?. ಇಂಥಾ ಕಷ್ಟ ಯಾರಿಗೂ ಬಾರದೇ ಇರಲಪ್ಪಾ.
ಸಾವು ಹೇಳಿ ಕೇಳಿ ಬರುವುದಿಲ್ಲ. ಹಾಗಂತ ಇಂತಹ ಸನ್ನಿವೇಶದಲ್ಲಿ ಬರಬಾರದು ಎಂಬುದು ಈ ದೃಶ್ಯ ನೋಡಿದಾಗ ಅನಿಸುತ್ತದೆ. ಯಾಕೆಂದರೆ ಹೋಟೆಲ್ ಒಂದರಲ್ಲಿ ಊಟ ಆರ್ಡರ್ ಮಾಡಿ ಕಾಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅಂದಹಾಗೆಯೇ ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕುರ್ಚಿಯಲ್ಲಿ ಕುಳಿತು ಆಹಾರಕ್ಕಾಗಿ ಕಾಯುತ್ತಿದ್ದ ವೇಳೆ ವ್ಯಕ್ತಿಗೆ ಧಿಡೀರ್ ಹೃದಯಾಘಾತವಾಗಿದೆ. ಬಳಿಕ ವ್ಯಕ್ತಿ ಹಾಗೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಹೀಗೆ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪುವ ದೃಶ್ಯ್ಗ ಹೋಟೆಲ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.