ಸ್ವಂತ ಪತಿಯೇ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ್ರೆ ಅದು ಕೂಡ ಅತ್ಯಾಚಾರ ; ಹೈಕೋರ್ಟ್

ಗುಜರಾತ್ : ಹೈಕೋರ್ಟ್ ಅಚ್ಚರಿಯ ತೀರ್ಪೊಂದನ್ನ ನೀಡಿದೆ. ಸ್ವಂತ ಪತಿಯೇ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ರೆ, ಅದು ಕೂಡ ಅತ್ಯಾಚಾರ ಎಂದು ಹೇಳಿದೆ.

ಪತಿಯೋರ್ವ ತನ್ನ ಪತ್ನಿಯ ಜೊತೆ ನಡೆದ ಆತ್ಮೀಯ ಕ್ಷಣಗಳನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಕುಟುಂಬದ ವಾಟ್ಸ್ಆ್ಯಪ್ ಗುಂಪುಗಳಲ್ಲಿ ಹರಿಬಿಟ್ಟಿದ್ದ. ಅಷ್ಟೇ ಅಲ್ಲದೆ ಆ ದೃಶ್ಯಗಳನ್ನ ಅಶ್ಲೀಲ ವೆಬ್ಸೈಟ್ಗಳಲ್ಲಿ ಹರಿಬಿಟ್ಟಿದ್ದ.

ಈ ಸಂಬಂಧ ಕಳೆದ ಆಗಸ್ಟ್ನಲ್ಲಿ ಆಕೆ ಪತಿಯ ವಿರುದ್ಧ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿತ್ತು. ಪೊಲೀಸರು ಸಂತ್ರಸ್ತೆಯ ಪತಿ ಹಾಗೂ ಅತ್ತೆಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಗುಜರಾತ್ ಹೈಕೋರ್ಟ್, ಆರೋಪಿಗಳ ಜಾಮೀನು ಅರ್ಜಿಯನ್ನ ತಿರಸ್ಕರಿಸಿದ್ದು, ಒಬ್ಬ ಮನುಷ್ಯ ಅಂದ್ರೆ ಒಬ್ಬ ಮನುಷ್ಯನೇ, ಹಾಗೇ ಒಂದು ಆ್ಯಕ್ಟ್ ಅಂದರೆ ಅದು ಆಕ್ಟ್. ಹಾಗೆಯೇ ಅತ್ಯಾಚಾರ ಎಂದಿಗೂ ಅತ್ಯಾಚಾರವೇ ಆಗಿರುತ್ತದೆ. ಅದು ಸ್ವಂತ ಪತಿ ನಡೆಸಿದ್ರೂ ಕೂಡ ಅತ್ಯಾಚಾರವೇ ಎಂದು ತೀರ್ಪು ನೀಡಿದೆ.

Scroll to Top