ಉಡುಪಿ : ಷೇರು ಮಾರುಕಟ್ಟೆಯ ಹೂಡಿಕೆಯ ಮೂಲಕ ಹೆಚ್ಚಿನ ಹಣ ಗಳಿಸಬಹುದೆಂದು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬಗ್ಗೆ ಇಲ್ಲಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಹಿಳೆಯೊಬ್ಬರಿಗೆ ಟೈಗರ್ ಗ್ಲೋಬಲ್ ಟ್ರೇಡ್ ಎಂಬ ಮೊಬೈಲ್ ಆ್ಯಪ್ ಕಂಪನಿಯು ಟಿಆರ್ ಟ್ರೇಡ್ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು ಎಂದು ಅಪರಿಚಿತರಿಂದ ಟೆಲಿಗ್ರಾಮ್ ಮತ್ತು ವಾಟ್ಸಾಪ್‌ನಲ್ಲಿ ಸಂದೇಶಗಳು ಬಂದಿವೆ.
ಇದರೊಂದಿಗೆ ಅಪರಿಚಿತರು 48-72 ಗಂಟೆಗಳ ಒಳಗೆ ಹಣವನ್ನು ಹಿಂಪಡೆಯಬಹುದೆಂಬ ಭರವಸೆ ನೀಡಿದ್ದಾರೆ. ಇದರಲ್ಲಿ ಹಣ ಹೂಡಿಕೆ ಮಾಡಲು ಮಹಿಳೆಯೂ, ವಂಚಕರು ಕಳುಹಿಸಿದ ಟೆಲಿಗ್ರಾಂ ಮತ್ತು ವಾಟ್ಸಾಪ್ ಗ್ರೂಪ್‌ಗಳಿಗೆ ಲಿಂಕ್ ಮೂಲಕ ಹಣ ಕಳುಹಿಸಬೇಕಿತ್ತು. ಇದನ್ನು ನಂಬಿದ ಮಹಿಳೆ ಒಟ್ಟು 51,90,000 ರೂ.ಗಳನ್ನು ನವೆಂಬರ್ 16 ಮತ್ತು ಡಿಸೆಂಬರ್ 13 ರ ನಡುವೆ UPI ಮತ್ತು IMPS ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ.
ಆದರೆ ಆರೋಪಿಗಳು ಹಣ ಮತ್ತು ಲಾಭಾಂಶವನ್ನು ನೀಡದೆ ವಂಚಿಸಿದ್ದಾರೆ. ಘಟನೆಯ ಕುರಿತು ಸೇನ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಉಡುಪಿ : ಮಹಿಳೆಗೆ 51.9 ಲಕ್ಷ ರೂ ವಂಚನೆ
![](https://www.baravanige.com/wp-content/uploads/2023/12/Indian-Rupee-1024x576.jpg)