ಕರಾವಳಿಗರೇ ಎಚ್ಚರ.. ಮೈಗೆ ಎಣ್ಣೆ, ಗ್ರೀಸ್ ಹಚ್ಚಿಕೊಂಡು ಬರ್ತಾರೆ ಈ ಚಡ್ಡಿ ಗ್ಯಾಂಗ್.. ಹುಷಾರಾಗಿರಿ

ಉಡುಪಿ : ಉತ್ತರ ಭಾರತದ ಕಿಲಾಡಿ ಕಳ್ಳರ ಗ್ಯಾಂಗ್ ಹೋಲುವ ತಂಡ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕೈಚಳಕ ಮಾಡುತ್ತಿದೆ. ರೆಸಿಡೆನ್ಶಿಯಲ್ ಏರಿಯಾದ ಕಳ್ಳತನ ಪ್ರಕರಣಗಳು ಪೋಲಿಸರ ನಿದ್ದೆಗೆಡಿಸಿದೆ. ಮೈಗೆ ಎಣ್ಣೆ, ಗ್ರೀಸ್ ಹಚ್ಚಿಕೊಂಡು ಬರುವ ತಂಡ, ಲಕ್ಷಾಂತರ ರೂಪಾಯಿ ಲಪಟಾಯಿಸಿ ಪರಾರಿಯಾಗಿದೆ.

ಮೈಗೆ ಎಣ್ಣೆ ಹಚ್ಚಿ, ಕೇವಲ ಚಡ್ಡಿಯಲ್ಲಿ ಬರುವ ದರೋಡೆಕೋರರು

ಉಡುಪಿಯ ಸಂತಕಟ್ಟೆಯಲ್ಲಿನ ನವಮಿ ಬೇಕರಿ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳರು ಕೇವಲ ಚಡ್ಡಿಯನ್ನ ಹಾಕಿಕೊಂಡು, ಮೈ ತುಂಬಾ ಎಣ್ಣೆ ಹಚ್ಚಿಕೊಳ್ತಿರುವ ದೃಶ್ಯಗಳು ಲಭ್ಯವಾಗಿದೆ. ಇದರ ಆಧಾರದಲ್ಲಿ ಉಡುಪಿಯಲ್ಲೊಂದು ನಟೋರಿಯಸ್ ಗ್ಯಾಂಗ್ ಸಕ್ರಿಯವಾಗಿರುವುದು ಖಚಿತಗೊಂಡಿದೆ.

ಕಚ್ಚಾ ಬನಿಯನ್ ಗ್ಯಾಂಗ್ ಅಲಿಯಾಸ್ ಚಡ್ಡಿ ಗ್ಯಾಂಗ್. ಈವರೆಗೆ ಉತ್ತರ ಭಾರತದಲ್ಲಿ ವಿಲಕ್ಷಣ ಮಾದರಿಯಲ್ಲಿ ನಡೀತಿದ್ದ ಕಳ್ಳತನ ಕರಾಮತ್ತು. ಸೊಂಟಕ್ಕೆ 2 ಚಪ್ಪಲಿಯನ್ನು ಸಿಕ್ಕಿಸಿಕೊಂಡು ಕಸುಬಿಗೆ ಇಳಿಯುವ ಈ ತಂಡ, ಈ ಬಾರಿ ಯಡವಟ್ಟು ಮಾಡ್ಕೊಂಡಿದೆ. ಕೃತ್ಯ ನಡೆಸಿದ ಸ್ಥಳದಲ್ಲಿ ಒಂದು ಚಪ್ಪಲಿಯನ್ನ ಬಿಟ್ಟು ಮನೆಯವರ ಚಪ್ಪಲಿ ಧರಿಸಿ ತನ್ನ ಕುರುಹು ಬಿಟ್ಟು ಹೋಗಿದೆ.

ಈಶಾನ್ಯ ಭಾರತದಂತೆ ಉಡುಪಿಯಲ್ಲೂ ಆ್ಯಕ್ಟಿವ್..!

ಮನೆಮಂದಿ ನಿದ್ದೆಯಲ್ಲಿರುವಾಗ ಬಾಗಿಲನ್ನು ಒಡೆದು ಒಳಪ್ರವೇಶಿಸಿದ ಕಳ್ಳರು ಎರಡೂವರೆ ಲಕ್ಷ ರುಪಾಯಿ ಮೌಲ್ಯದ ದೇವರ ಚಿನ್ನ ಬೆಳ್ಳಿಯನ್ನು ಕದ್ದಿದ್ದಾರೆ. ಅಂಬಲಪಾಡಿ ಭಾಗದಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣ ಭೇದಿಸಲು ಹೋದಾಗ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಅಲ್ಲಿ ಕದ್ದ ವಾಹನ ಈ ಸಂತೆಕಟ್ಟೆಯಲ್ಲಿ ಸಿಕ್ಕ ವಾಹನ ಒಂದೇ ಆಗಿದೆ. ಈ ದ್ವಿಚಕ್ರ ವಾಹನ ಕಳವು ಮಾಡಿದ ಚಡ್ಡಿ ಗ್ಯಾಂಗ್ ಇಲ್ಲಿ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾಗಿದೆ.

ಅವರು ಯಾವುದಾದ್ರೂ ಗ್ಯಾಂಗ್ನಲ್ಲಿದ್ದರೋ, ಇಲ್ವೋ ಎಂಬುದು ಪರಿಶೀಲನೆ ಮಾಡಿ ಹೇಳುತ್ತೇವೆ. ಸಿಸಿಟಿವಿ ದೃಶ್ಯದ ಪ್ರಕಾರ ಗ್ಯಾಂಗ್ ಮೈಗೆ ಏನೋ ಹಚ್ಚಿಕೊಂಡು ಮನೆಗೆ ಎಂಟ್ರಿಯಾಗಿದೆ. ಆದರೆ ಏನು ಹಚ್ಚಿಕೊಂಡಿದ್ದಾರೆಂದು ಸ್ಪಷ್ಟನೆ ಇಲ್ಲ.

ಡಾ. ಅರುಣ್ ಕೆ, ಉಡುಪಿ ಎಸ್ಪಿ

ಚಡ್ಡಿ ಗ್ಯಾಂಗ್ ಸದ್ದು!

1990-91, ಈಶಾನ್ಯ ರಾಜ್ಯಗಳು, ದೆಹಲಿಯಲ್ಲಿ ಗ್ಯಾಂಗ್ ಸದ್ದು
ದರೋಡೆ, ಮನೆ ಕಳ್ಳತನ & ಕೊಲೆಗಳನ್ನ ಮಾಡುತ್ತಾ ಕುಖ್ಯಾತಿ
ಬರೀ ಮೈ ಗೆ ಸಂಪೂರ್ಣ ಎಣ್ಣೆಯನ್ನು ಹಚ್ಚಿಕೊಂಡು ಪಾತಕ
ಕೇವಲ ಚಡ್ಡಿಯನ್ನು ಹಾಕಿಕೊಂಡು ರಾತ್ರಿ ವೇಳೆ ದರೋಡೆ ಕೃತ್ಯ
ನೈಜ ಘಟನೆ ಆಧಾರಿತ ಡೆಲ್ಲಿ ಕ್ರೈಮ್ -2 ಎಂಬ ವೆಬ್ಸೀರಿಸ್
ಇನ್ನು, ಉಡುಪಿಯ ವಿಚಾರಕ್ಕೆ ಬಂದ್ರೆ, ಪೊಲೀಸರು ವಿಶೇಷ ತಂಡಗಳನ್ನ ರಚಿಸಿದ್ದಾರೆ.. ಆರೋಪಿಗಳ ಹುಡುಕಾಟ ನಡೆಸ್ತಿದ್ದಾರೆ.. ಆದ್ರೆ, ಜನರಲ್ಲಿ ಮಾತ್ರ ಆತಂಕ ಮರೆಯಾಗಿಲ್ಲ.

‘5-6 ಜನ ಇದ್ರೂ, ಚಡ್ಡಿ ಹಾಕಿದ್ರು’

ಕ್ಯಾಮೆರಾದಲ್ಲಿ ನೋಡುವಾಗ ಐದಾರು ಜನ ಇದ್ದಾರೆ. ಕೇವಲ ಚಡ್ಡಿಯಲ್ಲಿ ಮಾತ್ರ ಇದ್ದಾರೆ. ಆದರೆ ಹೋಗುವಾಗ ಚಪ್ಪಲಿ ಬಿಟ್ಟು ಮಗುವಿನ ಚಪ್ಪಲಿ ಹಾಕೊಂಡು ಹೋಗಿದ್ದಾರೆ.

ಶಶಿಕಾಂತ್, ಮನೆ ಮಾಲೀಕರು

ಸದ್ಯ ನಗರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದಲ್ಲಿ ಹಲವಾರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗ್ತಿದೆ. ಇನ್ನು, ಪಾತಕಿ ಗ್ಯಾಂಗ್ನಿಂದ ಆತಂಕಗೊಂಡ ಜನ, ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಬೇಕು ಅಂತ ಒತ್ತಾಯಿಸಿದ್ದಾರೆ.

Scroll to Top