ಉಡುಪಿ: ಮೀನುಗಾರಿಕೆಗೆ ಬಲೆ ಬೀಸುತ್ತಿದ್ದ ಯುವಕ ಸಮುದ್ರ ಅಲೆಗೆ ಸಿಲುಕಿ ಮೃತ್ಯು…!!

ಉಡುಪಿ: ಕೈರಂಪಣಿ ಮೀನುಗಾರಿಕೆಗೆ ಬಲೆ ಬೀಸುತ್ತಿದ್ದ ಯುವಕ ಸಮುದ್ರದ ಅಲೆಗೆ ಸಿಲುಕಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪ ಕಾಡಿಪಟ್ಣ ಬೀಚ್‌ ಬಳಿ ಸಂಭವಿಸಿದೆ.

ಪಡುಬಿದ್ರಿ ಗೋಪಾಲ ಅವರ ಮಗ ವಸಂತ (32) ಪಾದೆಬೆಟ್ಟು ಯಾನೆ ಬಡ್ಡು ಮೃತ ಯುವಕ.

ಮೃತ ವಸಂತ್‌ ಪಡುಬಿದ್ರಿಯ ಭುವನೇಂದ್ರ ಅವರ ಕೈರಂಪಣಿ ದೋಣಿಯಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು ಶುಕ್ರವಾರ ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿದೆ.
ಮೀನುಗಾರಿಕೆಗಾಗಿ ಕೈರಂಪಣಿಯ ಬಲೆಯ ಇನ್ನೊಂದು ತುದಿಯನ್ನು ಹಿಡಿದುಕೊಂಡು ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಆಯತಪ್ಪಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top