ಮಲ್ಪೆಯ ಮೀನಿಗಾರರ ಬಲೆಗೆ ಬಿತ್ತು ದೈತ್ಯ ಮೀನು..!

ಉಡುಪಿ: ಮಲ್ಪೆಯ ಮೀನಿಗಾರರ ಬಲೆಗೆ ಬೃಹತ್ ಗಾತ್ರದ ಮೀನೊಂದು ಬಿದ್ದಿದ್ದು ಬರೋಬ್ಬರಿ 400 ಕೆ ಜಿ ತೂಕ ಹೊಂದಿದೆ.

ಮಲ್ಪೆಯ ಬಲರಾಂ ಪರ್ಸೀನ್ ಬೋಟಿನವರಿಗೆ ಈ ಬೃಹತ್ ಗಾತ್ರದ ಮೀನು ದೊರೆತಿದೆ.

ಈ ಮೀನಿನ ಸಾಮಾನ್ಯ ಹೆಸರು ಬಿಲ್‌ಫಿಶ್ ಆಗಿದ್ದು ಇದನ್ನು ಸ್ಥಳೀಯವಾಗಿ ಮಡಲು ಮೀನು ಅಥವಾ ಕಟ್ಟೆಕೊಂಬು ಮೀನು ಎಂಬುದಾಗಿ ಕರೆಯಲಾಗುತ್ತದೆ.

ಇದು ಗಿಲ್‌ನೆಟ್‌ನಲ್ಲಿ ಸಣ್ಣ ಗಾತ್ರದಲ್ಲಿ ಸಾಮಾನ್ಯವಾಗಿ ಸಿಗುತ್ತಿರುತ್ತದೆ. ಈ ರೀತಿ ದೊಡ್ಡ ಗಾತ್ರದಲ್ಲಿ ಈ ಮೀನು ದೊರೆಯುವುದು ಅಪರೂಪದಲ್ಲಿ ಅಪರೂಪವಾಗಿದೆ ಎನ್ನಲಾಗಿದೆ. ಸಣ್ಣ ಮಡಲು ಮೀನಿಗೆ ಇರುವಷ್ಟು ಬೆಲೆ ದೊಡ್ಡ ಮೀನಿಗೆ ಇರುವುದಿಲ್ಲ ಎಂದು ಮಲ್ಪೆ ಕನ್ನಿ ಮೀನುಗಾರ ಸಂಘದ ಅಧ್ಯಕ್ಷ ದಯಕರ ವಿ.ಸುವರ್ಣ ಮಾಹಿತಿ ನೀಡಿದ್ದಾರೆ.

You cannot copy content from Baravanige News

Scroll to Top