ಕೇಸರಿ ವಸ್ತ್ರದಲ್ಲಿ ಶಾಲಾ ಮಕ್ಕಳ ನೃತ್ಯ ಪ್ರದರ್ಶನಕ್ಕೆ ಹಿಂದೂ ಜಾಗರಣ ವೇದಿಕೆ ವಿರೋಧ ; ಕಾರಣವೇನು..!??

ಉಡುಪಿ : ಕ್ರೈಸ್ತ ಶಾಲೆಯಲ್ಲಿ ನಡೆದ ಮಕ್ಕಳ ನೃತ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಕ್ರಿಸ್ಮಸ್ ಹಿನ್ನೆಲೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಂದಷ್ಟು ಮಕ್ಕಳು ಕೇಸರಿ ಮುಂಡಾಸು ಧರಿಸಿ ನೃತ್ಯ ಮಾಡಿದ್ದರು. ಆದ್ರೆ ಮಕ್ಕಳು ದೇವರಿಂದ ದೂರಾದರು ಹಾಡಿನ ಸಾಲಿಗೆ ಮಕ್ಕಳು ನೃತ್ಯ ಮಾಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ವೈರಲ್ ಆದ ಬೆನ್ನಲ್ಲೇ ಶಾಲಾ ಮಕ್ಕಳ ನೃತ್ಯಕ್ಕೆ ಹಿಂದೂ ಸಂಘಟನೆಗಳ ವಿರೋಧ ವ್ಯಕ್ತಪಡಿಸಿದ್ದಾರೆ. ಕೋಮು ವಿಚಾರವಾಗಿ ಹೊಡೆದಾಡುವ ದೃಶ್ಯವಿದ್ದು, ಇದರಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಹೊಡೆದಾಡುವವರು, ಪುಡಿರೌಡಿಗಳು ಎಂದು ಬಿಂಬಿಸುವ ಹುನ್ನಾರ ನಡೆಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ, ಅಯ್ಯಪ್ಪ ಮಾಲೆ ಹಾಕಿ ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಆಗ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದರು. ಈಗ ಮತ್ತೆ ಹಿಂದೂ ಧರ್ಮದ ವಿಚಾರದಲ್ಲಿ ವಿಷಬೀಜ ಬಿತ್ತುತ್ತಿದೆ. ವಿಷಬೀಜ ಬಿತ್ತಿ ಶಾಲಾ ಮಂಡಳಿ ಮತಾಂತರಕ್ಕೆ ಹುನ್ನಾರ ಮಾಡ್ತಿದೆ ಎಂದು ಸ್ಟೆಲ್ಲಾ ಮೆರಿಸ್ ಶಾಲೆಯ ವಿರುದ್ಧ ಹಿಂದೂ ಜಾಗರಣ ವೇದಿಕೆ ಆರೋಪ ಮಾಡಿದೆ. ಈ ವಿಚಾರವಾಗಿ ಹಿಂದೂ ಜಾಗರಣ ವೇದಿಕೆ ಮುಖಂಡ ಯಶವಂತ್, ಶಾಲೆಯ ಆಡಳಿತ ಮಂಡಳಿ ಹಿಂದೂ ಸಮಾಜಕ್ಕೆ ಕ್ಷಮೆಯಾಚನೆ ಮಾಡಬೇಕು, ಇಲ್ಲವಾದರೇ ಕಾನೂನು ಹೋರಾಟಕ್ಕೆ ಇಳಿಯಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

You cannot copy content from Baravanige News

Scroll to Top