(ಡಿ.30-31) ಬಿರುವೆರ್ ಕಾಪು ಸೇವಾ ಸಮಿತಿ ಆಶ್ರಯದಲ್ಲಿ ‘ಬಿರುವೆರ್ ಕಾಪು ಟ್ರೋಫಿ -2023’

ಕಾಪು : ಬಿರುವೆರ್ ಕಾಪು ಸೇವಾ ಸಮಿತಿಯ ಆಶ್ರಯದಲ್ಲಿ ಬಿಲ್ಲವ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಸಮಾಜ ಸೇವೆಯ ಸಹಾಯಾರ್ಥವಾಗಿ ಪ್ರಪ್ರಥಮ ಭಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮಟ್ಟದ ಬಿಲ್ಲವ ಸಮುದಾಯ ಬಾಂಧವರಿಗೆ ಕ್ರಿಕೆಟ್‌ ಪಂದ್ಯಾವಳಿಯು ಡಿಸೆಂಬರ್ 30-31 ರಂದು ಲೀಗ್ ಕಮ್ ನಾಕೌಟ್ ಮಾದರಿಯ 90 ಗಜಗಳ ಕ್ರಿಕೆಟ್ ಪಂದ್ಯಾಕೂಟ ಕಾಪು ದಂಡತೀರ್ಥ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಆಮಂತ್ರಣ ಪತ್ರಿಕೆ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್‌ ತಿಳಿಸಿದರು.

ಸುಮಾರು ಎರಡು ಲಕ್ಷ ರೂಪಾಯಿಗಳ ಬಹುಮಾನದ ಪಂದ್ಯಾಟ ಇದಾಗಿದ್ದು, ಉತ್ತಮ ದಾಂಡಿಗ, ಉತ್ತಮ ಎಸೆತಗಾರ ಸರಣಿ ಶ್ರೇಷ್ಠ, ಪಂದ್ಯದ ಶ್ರೇಷ್ಠ ಪ್ರಶಸ್ತಿ ನೀಡಲಿದೆ ಎಂದರು.

ಸಭಾ ಕಾರ್ಯಕ್ರಮ ಉದ್ಘಾಟನೆಯಲ್ಲಿ ಆರ್ಯ ಈಡಿಗ ಮಹಾ ಸಂಸ್ಥಾನ ಸೋಲೂರು ಮಠದ ಸ್ವಾಮೀಜಿ ಶ್ರೀ ವಿಖ್ಯಾತನಂದರು ಭಾಗವಹಿಸಿ ಆಶೀರ್ವಚನ ಮಾಡಲಿದ್ದಾರೆ.

ಸಮಾಜದ ವಿವಿಧ ಗಣ್ಯರು ಮಾಜಿ ಶಾಸಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಆದಿತ್ಯವಾರ ಸಂಜೆ ಆರು ಗಂಟೆಗೆ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸುಜನ್ ಎಲ್ ಸುವರ್ಣ ಕುತ್ಯಾರ್, ವರುಣ್ ಬಿ ಕೋಟ್ಯಾನ್, ರವಿರಾಜ್ ಶಂಕರಪುರ, ಮಾಧವ ಪೂಜಾರಿ, ಯೋಗೀಶ್ ಪೂಜಾರಿ ಕಾಪು ಉಪಸ್ಥಿತರಿದ್ದರು.

You cannot copy content from Baravanige News

Scroll to Top