‘ಎಂಫಿಲ್‌ಗೆ ಮಾನ್ಯತೆ ಇಲ್ಲ, ಅಡ್ಮಿಷನ್‌ ನಿಲ್ಲಿಸಿ’ – ಯುಜಿಸಿ

ನವದೆಹಲಿ : ಇನ್ಮುಂದೆ ಮಾಸ್ಟರ್ ಆಫ್ ಫಿಲಾಸಫಿ ಪದವಿ (ಎಂಫಿಲ್) ಇರೋದಿಲ್ಲ ಎಂದು ಯುಜಿಸಿ ತಿಳಿಸಿದೆ. ಕೋರ್ಸ್ ಗೆ ದಾಖಲಾಗಿದ್ದ ವಿದ್ಯಾರ್ಥಿಗಳನ್ನ ತಕ್ಷಣದಿಂದಲೇ ಕೈಬಿಡಬೇಕು ಎಂದು ಹೇಳಿದೆ.

ಶಿಕ್ಷಣ ಸಂಸ್ಥೆಗಳು ಒಂದು ಪದವಿಯಂತೆ ಆಫರ್ ಮಾಡುವುದನ್ನ ನಿಲ್ಲಿಸಬೇಕೆಂದು ಯುಜಿಸಿ ಆದೇಶ ಹೊರಡಿಸಿದ್ದು, ಈಗಾಗಲೇ ‌ಕೆಲ ವಿವಿಗಳು ಹೊಸದಾಗಿ ಅರ್ಜಿಗಳನ್ನು ಆಹ್ವಾನಿಸಿರೋದು ಯುಜಿಸಿ ಗಮನಕ್ಕೆ ಬಂದಿದೆ. ಹೀಗಾಗಿ 2022ರಲ್ಲೇ ಯುಜಿಸಿಯಿಂದ ಎಂಫಿಲ್ ಗೆ ಮಾನ್ಯತೆ ಸ್ಥಗಿತ ಮಾಡಿದೆ. ಹೀಗಾಗಿ 2023-24 ರಲ್ಲಿ ಎಂಫಿಲ್ ಗೆ ದಾಖಲಾತಿ ಮಾಡಿಕೊಳ್ಳದಂತೆ ಈಗಾಗಲೇ ಯುಜಿಸಿ ಆದೇಶ ಹೊರಡಿಸಿದೆ.

ಎಂಫಿಲ್ ಸ್ಥಗಿತಗೊಳಿಸಲು ಕಾರಣವೇನು..!?

ಯುಜಿಸಿಯ ನಿಯಮಗಳು 2022ರ ನಿಯಮಾವಳಿ 14ರಲ್ಲೇ ಉನ್ನತ ಶಿಕ್ಷಣ ಸಂಸ್ಥೆ ಯಾವುದೇ ಎಂಫಿಲ್ ಕಾರ್ಯಕ್ರಮ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಈಗ ಕೆಲ ವಿಶ್ವವಿದ್ಯಾನಿಲಯಗಳು ಎಂಫಿಲ್ ಕಾರ್ಯಕ್ರಮಕ್ಕೆ ಹೊಸದಾಗಿ ಅರ್ಜಿ ಆಹ್ವಾನಿಸುತ್ತಿರುವುದು ಯುಜಿಸಿಯ ಗಮನಕ್ಕೆ ಬಂದಿದೆ
ಈ ಬೆನ್ನಲ್ಲೆ ಎಂಫಿಲ್ ಪದವಿ ಮಾನ್ಯತೆ ಪಡೆದ ಪದವಿಯಲ್ಲ ಎಂಬುದನ್ನು ಮತ್ತೊಮ್ಮೆ ಗಮನಕ್ಕೆ ತಂದಿದೆ

Scroll to Top