ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನ

ಶಿರ್ವ : ಪಡುಬೆಳ್ಳೆ ಶ್ರೀ ಮಹಾಲಿಂಗೇಶ್ವರ ದೇವರ ಪುನಃಪ್ರತಿಷ್ಠೆಯ ದ್ವಾದಶ ವರ್ಷದ ಪ್ರಯುಕ್ತ ಕ್ಷೇತ್ರದ ತಂತ್ರಿಗಳಾದ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಅವರ ನೇತೃತ್ವದಲ್ಲಿ ಅರ್ಚಕ ವೇ|ಮೂ| ಬೆಳ್ಳೆ ಮಧ್ವರಾಜ ಭಟ್ಟರ ಸಹಯೋಗದೊಂದಿಗೆ ಗುರುವಾರ ಬ್ರಹ್ಮಕುಂಭಾಭಿಷೇಕ ಸಂಪನ್ನಗೊಂಡಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.

ಡಿ.25 ರಂದು ವಿವಿಧ ಕಾರ್ಯಕ್ರಮಗಳು ಪ್ರಾರಂಭ ಗೊಂಡಿದ್ದು, ಗುರುವಾರ ಬೆಳಗ್ಗೆ ದಶವಿಧ ಸ್ನಾನ, 504 ಕಲಶಾಭಿಷೇಕ, 10.50ರ ಕುಂಭ ಲಗ್ನದಲ್ಲಿ ಬ್ರಹ್ಮಕುಂಭಾಭಿಷೇಕ, ನ್ಯಾಸಪೂಜೆ, ಮಹಾಪೂಜೆ, ಅವಸ್ರುತಬಲಿ, ಪಲ್ಲಪೂಜೆ, ಬ್ರಾಹ್ಮಣಾರಾಧನೆ, ಅನ್ನಸಂತರ್ಪಣೆ, ಸಾಯಂಕಾಲ ದೀಪಾರಾಧನೆ ಪೂಜೆ, ರಾತ್ರಿ ರಂಗಪೂಜೆ, ದೇವರ ಉತ್ಸವ ಬಲಿ, ಪರಿವಾರ ದೇವರಿಗೆ ಕಲಶ ಪೂರಣೆ ನಡೆಯಿತು.

ಡಿ. 29 ರಂದು ಬೆಳಗ್ಗೆ ಮಹಾರುದ್ರಯಾಗ, ಪರಿವಾರ ದೈವಗಳ ಕಲಶಾಭಿಷೇಕ, ಸಾಯಂಕಾಲ 4ರಿಂದ ಶ್ರೀಚಕ್ರ ಪೂಜೆ, ಬ್ರಾಹ್ಮಣ ಸುವಾಸಿನಿ, ವಟು ಕನ್ನಿಕಾರಾಧನೆ, ರಾತ್ರಿ ಪೂಜೆ, ಆಚಾರ್ಯ ಪೂಜೆ, ಮಂಗಲ ಮಂತ್ರಾಕ್ಷತೆ, ಮಹಾಪ್ರಸಾದ ವಿತರಣೆ ನಡೆಯಲಿದೆ.

ದೇವಸ್ಥಾನದ ಆಡಳಿತ ಮೊಕ್ತೇಸರ ಬೆಳ್ಳೆ ದೊಡ್ಡಮನೆ ಸುಭಾಶ್ಚಂದ್ರ ಶೆಟ್ಟಿ, ಬೆಳ್ಳೆ ದೊಡ್ಡಮನೆ ಸೀತಾರಾಮ ಶೆಟ್ಟಿ, ಪಠೇಲ್‌ ಮನೆ ದಯಾನಂದ ಶೆಟ್ಟಿ, ಬೆಳ್ಳೆ ಕಕ್ರಮನೆ ಹರೀಶ್‌ ಶೆಟ್ಟಿ, ಬೆಳ್ಳೆ ನಡಿಮನೆ ವಿಶ್ವನಾಥ ಶೆಟ್ಟಿ, ಬೆಳ್ಳೆ ಗರಡಿಮನೆ ಸದಾನಂದ ಪೂಜಾರಿ, ಭಾಸ್ಕರ ಶೆಟ್ಟಿ ಸಡಂಬೈಲು, ಪಡುಬೆಳ್ಳೆ ಸುಧಾಕರ ಪೂಜಾರಿ, ಬೆಳ್ಳೆ ದೊಡ್ಡಮನೆ ಅಶೋಕ್‌ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಬೆಳ್ಳೆ ಸದಾನಂದ ಶೆಣೈ, ರಾಮಚಂದ್ರ ನಾಯಕ್‌, ವಿಹಿಂಪ, ಬಜರಂಗದಳ ಮಾತೃಶಕ್ತಿ ಘಟಕದ ಸದಸ್ಯರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು, ವಿವಿಧ ಸಂಘ‌ಟನೆಗಳ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

Scroll to Top