ಚಿತ್ರದುರ್ಗ, ಡಿ.29: ಕೋಟೆನಾಡಿನ ಪಾಳುಬಿದ್ದ ಮನೆಯೊಂದರಲ್ಲಿ ಪತ್ತೆಯಾಗಿರುವುದು 3 ಅಸ್ಥಿಪಂಜರಗಳಲ್ಲ ಒಟ್ಟು 5 ಅಸ್ತಿಪಂಜರ ಎಂಬ ರೋಚಕ ಮಾಹಿತಿ ಬಹಿರಂಗವಾಗಿದೆ. ಪತ್ತೆಯಾದ 5 ಅಸ್ತಿಪಂಜರಗಳು ಚಳ್ಳಕೆರೆ ಗೇಟ್ ಬಳಿ ವಾಸವಿದ್ದ ಜಗನ್ನಾಥ್ ರೆಡ್ಡಿ ಕುಟುಂಬದವರೇ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಪಾಳು ಬಿದ್ದ ಮನೆಯಲ್ಲಿ ಮೃತರನ್ನು ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮಾ ರೆಡ್ಡಿ, ಮಕ್ಕಳಾದ ತ್ರಿವೇಣಿ ರೆಡ್ಡಿ, ನರೇಂದ್ರ ರೆಡ್ಡಿ, ಕೃಷ್ಣಾ ರೆಡ್ಡಿ ಎಂದು ಅಂದಾಜಿಸಲಾಗಿದೆ.
ಮೊದಲ ಬಾರಿಗೆ ಒಂದು ಬೆಡ್ ರೂಮ್ನಲ್ಲಿ ಮೂರು ಅಸ್ಥಿಪಂಜರಗಳು ಪತ್ತೆ ಆಗಿದ್ದವು. ಕೆಲ ಸಮಯದ ನಂತರ ಮತ್ತೊಂದರಲ್ಲಿ 2 ಅಸ್ಥಿಪಂಜರ ಪತ್ತೆಯಾಗಿವೆ. ಜಗನ್ನಾಥ್ ರೆಡ್ಡಿಯವರು ದೊಡ್ಡ ಸಿದ್ದವ್ವನಹಳ್ಳಿ ಮೂಲದವರಾಗಿದ್ದು ಮನೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಇವರ ಕುಟುಂಬದ್ದೇ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ. ಸದ್ಯ ವಿಧಿ ವಿಜ್ಞಾನ ತಜ್ಞರು ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಜಗನ್ನಾಥ್ ರೆಡ್ಡಿ ಹಾಗೂ ಪತ್ನಿ ಪ್ರೇಮಾ ಅವರಿಗೆ ಮೂವರು ಗಂಡು ಮಕ್ಕಳಿದ್ದು, ಓರ್ವ ಮಗಳಿದ್ದಳು. ಒಟ್ಟು 6 ಮಂದಿ ಕುಟುಂಬದಲ್ಲಿದ್ದರು. ಇವರ ಹಿರಿಯ ಮಗ ಡಾ.ಮಂಜುನಾಥ್ ರೆಡ್ಡಿ ಈ ಹಿಂದೆಯೇ ಮೃತಪಟ್ಟಿದ್ದನು. 2ನೇ ಮಗ ಕೃಷ್ಣಾ ರೆಡ್ಡಿ, ಮಗಳು ತ್ರಿವೇಣಿ ರೆಡ್ಡಿ ಹಾಗೂ 4ನೇ ಮಗ ನರೇಂದ್ರ ರೆಡ್ಡಿ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈ ಕೊನೆ ಮಗನ ವಿರುದ್ಧ ಸಾಕಷ್ಟು ವಂಚನೆ ಆರೋಪ ಕೇಳಿ ಬಂದಿದ್ದವು. ಮಗನ ಕೃತ್ಯಕ್ಕೆ ಬೇಸತ್ತು ಕುಟುಂಬವು ಸಮಾಜದಿಂದ ದೂರ ಉಳಿದಿತ್ತು. ಇಂತಹ ಆರೋಪಗಳು ಹಿನ್ನೆಲೆಯಲ್ಲಿ ಕುಟುಂಬ ಸಮೇತ ತುಮಕೂರಿಂದ ಚಿತ್ರದುರ್ಗಕ್ಕೆ ಬಂದಿದ್ದರು
ಮನೆಯಲ್ಲಿ ಪತ್ತೆಯಾದ ಅಸ್ಥಿಪಂಜರಗಳ ಬಗ್ಗೆ ಜಗನಾಥ್ ಸಂಬಂಧಿಯಾದ ಪವನ್ ಕುಮಾರ್ ಎಂಬುವರಿಂದ ಬಡಾವಣೆ ಠಾಣೆಗೆ ದೂರು ನೀಡಿದ್ದರು. ಸಂಬಂಧಿ ಜಗನ್ನಾಥ್ ರೆಡ್ಡಿ ಮತ್ತು ಕುಟುಂಬ ವಾಸವಾಗಿದ್ದರು. 3 ವರ್ಷದ ಹಿಂದೆಯೇ ಮನೆಯಲ್ಲಿ ಮೃತಪಟ್ಟಿರಬಹುದು. ಮೃತರ ಸಾವಿನ ಬಗ್ಗೆ ಅನುಮಾನ ಇದೆ ಎಂದು ಅವರು ಪ್ರಕರಣ ದಾಖಲು ಮಾಡಿದ್ದಾರೆ.
ಪತ್ತೆಯಾದ ಅಸ್ಥಿಪಂಜರದ ಸುತ್ತ ಹಲವು ಅನುಮಾನಗಳಿವೆ. ಸುಮಾರು ವರ್ಷಗಳಿಂದ ಜಗನ್ನಾಥ್ ರೆಡ್ಡಿ ಕುಟುಂಬ ಯಾರ ಸಂಪರ್ಕದಲ್ಲಿ ಇಲ್ಲ. ನಮ್ಮ ಮನೆಗೆ ಅವರು ಬರ್ತಿರಲಿಲ್ಲ, ಅವರ ಮನೆಗೆ ನಾವು ಹೋಗ್ತಿರಲಿಲ್ಲ. ಕೆಲ ವರ್ಷಗಳಿಂದ ಜಗನ್ನಾಥ್ ರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಮನೆಯಲ್ಲಿ ಪತ್ತೆ ಆಗಿರುವುದು ಅವರವೇ ಅಸ್ಥಿಪಂಜರ ಆಗಿರಬಹುದು. 3 ವರ್ಷದ ಹಿಂದೆ ಅವರು ಮನೆಯಲ್ಲಿ ಮೃತಪಟ್ಟಿರಬಹುದು. ಮೃತರ ಸಾವಿನ ಬಗ್ಗೆ ಪವನ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.