ರಾಮ ಮಂದಿರ ಹೆಸರಲ್ಲಿ ಹಣ ಲೂಟಿ.. QR ಕೋಡ್ ಹಗರಣ ಬಯಲಿಗೆ..!

ರಾಮ ಮಂದಿರ ಉದ್ಘಾಟನೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಇದೀಗ ಆತಂಕದ ವಿಚಾರವೊಂದು ಬಯಲಾಗಿದ್ದು, ರಾಮ ಮಂದಿರ ಹೆಸರಲ್ಲಿ ಕೆಲವರು ಲೂಟಿ ಮಾಡಲು ಇಳಿದಿದ್ದಾರೆ ಎನ್ನಲಾಗುತ್ತಿದೆ.

ರಾಮ ಮಂದಿರ ನಿರ್ಮಾಣಕ್ಕೆ ಎಂದು ಭಕ್ತರಲ್ಲಿ ಹಣ ಎತ್ತಿ ವಂಚನೆ ಮಾಡ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನು ವಿಶ್ವ ಹಿಂದೂ ಪರಿಷದ್ ನೀಡಿದೆ. ಜೊತೆಗೆ ಭಕ್ತರು ಮೋಸ ಹೋಗದಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದೆ.

ಟ್ವೀಟ್ ಮಾಡಿರುವ ವಿಶ್ವ ಹಿಂದೂ ಪರಿಷದ್ನ ವಕ್ತಾರ ವಿನೋದ್ ಬನ್ಸಾಲ್, ಸೋಶಿಯಲ್ ಮೀಡಿಯಾ ಮೂಲಕ ರಾಮ ಮಂದಿರ ನಿರ್ಮಾಣ ಹೆಸರಲ್ಲಿ ಹಣ ಮಾಡುವ ದಂಧೆ ಬೆಳಕಿಗೆ ಬಂದಿದೆ.

‘ಶ್ರೀ ರಾಮ ಜನ್ಮಭೂಮಿ ತೀರ್ಥ ಛೆತ್ರ ಅಯೋಧ್ಯ, ಉತ್ತರ ಪ್ರದೇಶ’ ಅಂತಾ ಫೇಸ್ಬುಕ್ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದಾರೆ. ಅಲ್ಲಿ ಕ್ಯೂಆರ್ (QR) ಕೋಡ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಕೇಳಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಉತ್ತರ ಪ್ರದೇಶ ಗೃಹ ಸಚಿವಾಲಯ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Scroll to Top