Sunday, September 8, 2024
Homeಸುದ್ದಿಜಪಾನ್ ನಲ್ಲಿ 7.6 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ..!!

ಜಪಾನ್ ನಲ್ಲಿ 7.6 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ..!!

ಟೋಕಿಯೋ, ಜ 01: ಜಪಾನ್‌ನ ಪಶ್ಚಿಮ ಭಾಗದಲ್ಲಿ ಅತ್ಯಂತ ಪ್ರಬಲವಾದ 7.6 ತೀವ್ರತೆಯ ಭೂಕಂಪ ಉಂಟಾಗಿರುವುದಾಗಿ ವರದಿಯಾಗಿದ್ದು, ಹೀಗಾಗಿ ವಿವಿಧ ರಾಜ್ಯಗಳಲ್ಲಿರುವ ತನ್ನ ನಿವಾಸಿಗಳಿಗೆ 3 ಹಂತದ ಸುನಾಮಿ ಎಚ್ಚರಿಕೆಗಳನ್ನು ರವಾನಿಸಿದೆ.

ಹೊಸ ವರ್ಷದ ಆರಂಭದ ದಿನದಂದೇ ಜಪಾನ್ ನಲ್ಲಿ ಭೂಕಂಪದ ಭೀತಿಯಿಂದ ಬೀದಿಯಲ್ಲಿ ಕುಳಿತು ದಿನ ಕಳೆಯುತ್ತಿದ್ದಾರೆ.

ದೇಶದ ವಾಯುವ್ಯ ಕರಾವಳಿಯ ಭಾಗದಿಂದ ಸುನಾಮಿ ಎಚ್ಚರಿಕೆ ನೀಡಲಾಗಿದ್ದು ಸಂಜೆ 4:10ಕ್ಕೆ ಭೂಕಂಪ ಸಂಭವಿಸಿದೆ. ವರದಿಗಳ ಪ್ರಕಾರ ಪ್ರಬಲ ಭೂಕಂಪ ಕೇಂದ್ರ ಟೋಕಿಯೊದಲ್ಲಿನ ಕಟ್ಟಡಗಳನ್ನು ಸಹ ಅಲ್ಲಾಡಿಸಿದೆ. ಸಮುದ್ರ ತೀರದಲ್ಲಿರುವ ಜನರು ಕೂಡಲೇ ಸುರಕ್ಷಿತ ಜಾಗಗಳಿಗೆ ಧಾವಿಸುವಂತೆ ಜಪಾನ್‌ನ ಮಾಧ್ಯಮ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸುತ್ತಿದೆ

ಹೊಕುರಿಕು ಎಲೆಕ್ಟ್ರಿಕ್ ಪವರ್ ತನ್ನ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿಯಾವುದೇ ಅಸಹಜತೆಗಳಿಲ್ಲ ಕಂಡುಬಂದಿಲ್ಲ ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

ಮಾರ್ಚ್ 11, 2011 ರಂದು, ಈಶಾನ್ಯ ಜಪಾನ್‌ಗೆ ಭಾರಿ ಭೂಕಂಪ ಮತ್ತು ಸುನಾಮಿ ಅಪ್ಪಳಿಸಿ ಭೀಕರ ಹಾನಿಯಾಗಿದ್ದು ಫುಕುಶಿಮಾದಲ್ಲಿ ಪರಮಾಣು ಸ್ಥಾವರದಲ್ಲೂ ಸಮಸ್ಯೆ ಕಂಡುಬಂದಿತ್ತು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News