ಅನೈತಿಕ ಸಂಬಂಧ.. ಪತಿ ಹತ್ಯೆಗೆ ಪತ್ನಿ ಸುಪಾರಿ.. ಸಿಗರೇಟ್ ಮತ್ತು ಚಿಲ್ಲರೆ ಕೊಟ್ಟ ಸುಳಿವಿನಿಂದ ಆರೋಪಿಗಳು ಅರೆಸ್ಟ್

ಬೀದರ್ : ಅನೈತಿಕ ಸಂಬಂಧಕ್ಕೆ ಅಡ್ಡಿಯಾಗ್ತಾನೆಂದು ಪತಿಯನ್ನೇ ಹತ್ಯೆಗೈಯ್ದಿದ್ದ ಪತ್ನಿ ಆ್ಯಂಡ್ ಟೀಮ್ ಅನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಸಿಗರೇಟ್ ಮತ್ತು ಚಿಲ್ಲರೆ ನೀಡಿದ್ದ ಸುಳಿವಿನಿಂದ ಆರೋಪಿಗಳಾದ ಪತ್ನಿ ಚೈತ್ರಾ ಹಾಗೂ ಸ್ನೇಹಿತ ರವಿ ಪಾಟೀಲ್ನನ್ನು ಪೊಲೀಸರು ಬಂಧಿಸಿದ್ದಾರೆ.

ಬೀದರ್ ತಾಲೂಕಿನ ವಿಲಾಸಪುರ ಗ್ರಾಮದಲ್ಲಿ ನ.11 ರಂದು ನಡೆದಿದ್ದ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಮಿತ್ ಎಂಬಾತನನ್ನು ಆತನ ಪತ್ನಿ ಚೈತ್ರಾ ಹಾಗೂ ಸ್ನೇಹಿತ ರವಿ ಪಾಟೀಲ್ ಕೊಲೆ ಮಾಡಿದ್ದರು. ಕೊಲೆ ಬಳಿಕ ಅಪಘಾತದಂತೆ ದೃಶ್ಯ ಬಿಂಬಿಸಿ ಪ್ರಕರಣದಿಂದ ಪಾರಾಗಲು ಪ್ಲ್ಯಾನ್ ಮಾಡಿದ್ದರು.

ಅಮಿತ್ ಸಾವಿನ ಪ್ರಕರಣ ಜನವಾಡ ಠಾಣೆಯಲ್ಲಿ ದಾಖಲಾಗಿತ್ತು. ಆದರೆ ಪೊಲೀಸರು ಈ ಪ್ರಕರಣವನ್ನು ತೀವ್ರವಾಗಿ ಪರಿಗಣಿಸಿ ತನಿಖೆ ನಡೆಸಿದರು. ಬಳಿಕ ಪತ್ನಿ ಚೈತ್ರಾ ಹಾಗೂ ರವಿ ಪಾಟೀಲ್ ಎಂಬಾತ ಅಮಿತ್ನನ್ನು ಕೊಲೆ ಮಾಡಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.

ಅನೈತಿಕ ಸಂಬಂಧವೇ ಅಡ್ಡಿ

ಕೊಲೆ ಆರೋಪಿಗಳಾದ ಪತ್ನಿ ಚೈತ್ರಾ ಹಾಗೂ ರವಿ ಪಾಟೀಲ್ ಅನೈತಿಕ ಸಂಬಂಧ ಗಂಡನಿಗೆ ತಿಳಿದಿದ್ದಕ್ಕೆ ಅಮಿತ್ನನ್ನು ಹತ್ಯೆ ಮಾಡಿದ್ದಾರೆ. ಆದರೆ ಇದಕ್ಕೂ ಮುನ್ನ ಪತ್ನಿ ಚೈತ್ರಾ ಸ್ನೇಹಿತ ರವಿ ಪಾಟೀಲ್‌ನಿಂದ ದುಬಾರಿ ಆಭರಣ, ಗಿಪ್ಟ್ ಪಡೆದಿದ್ದಳು. ಆದರೆ ಇದೆಲ್ಲವನ್ನು ಗಮನಿಸಿದ ಅಮಿತ್ ಆಭರಣ, ಸ್ಕೂಟಿ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದ್ದನು.

ಹತ್ಯೆಗೆ ಪತ್ನಿಯೇ ಕೊಟ್ಟಲು ಸುಪಾರಿ

ಕೊನೆಗೆ ಅನೈತಿಕ ಸಂಬಂಧ ವಿಷಯ ಹೊರಬರುತ್ತೆ ಎಂದು ಚೈತ್ರಾ ಆ್ಯಂಡ್ ರವಿ ಪಾಟೀಲ್ ಅಮಿತ್ ಹತ್ಯೆಗೆ ಸ್ಕೆಚ್ ಹಾಕುತ್ತಾರೆ. ಅಮಿತ್ ಕೊಲೆ ಮಾಡಲು ವೆಂಕಟ್ ಗಿರಿಮಾಜೆ, ಆಕಾಶ್, ಸಿಖಂದರ್ ಶಹಾ‌ಗೆ ಸುಪಾರಿ ನೀಡುತ್ತಾರೆ. ಎರಡು ಬಾರಿ ಅಮಿತ್ ಹತ್ಯೆಗೆ ಯತ್ನಿಸುತ್ತಾರೆ. ಆದರೆ ಒಮ್ಮೆ ವಿಫಲವಾಗುಯತ್ತದೆ. ಎರಡನೇ ಬಾರಿ ಪಕ್ಕಾ ಪ್ಲಾನ್ ಮಾಡಿ ಹತ್ಯೆ ಮಾಡುತ್ತಾರೆ.

ಮೊದಲ ಪಯತ್ನ ವಿಫಲ

ನವೆಂಬರ್ 6 ರಂದು ಕೊಲೆ ಮಾಡಲು ಮೊದಲ ಯತ್ನ ನಡೆಸಿದರು. ಮೊದಲ ಬಾರಿಗೆ ಸ್ಕಾರ್ಪಿಯೋ ವಾಹನದಿಂದ ಬೈಕ್‌ಗೆ ಡಿಕ್ಕಿ‌ ಹೊಡೆಸಿ ಸಾಯಿಸಲು ಮುಂದಾದರು. ಆದರೆ ಅದು ವಿಫಲವಾಯಿತು. ನಂತರ ಎರಡನೇ ಬಾರಿ ಅಲಿಯಂಬರ್- ಪೋಮಾ ತಾಂಡಾ ಮಾರ್ಗ ಮದ್ಯದಲ್ಲಿ ಹಲ್ಲೆ ಮಾಡಿದ ಆರೋಪಿಗಳು ಆತನನ್ನು ಹತ್ಯೆ ಮಾಡುತ್ತಾರೆ. ನವೆಂಬರ್ 11 ರಂದು ರಾಡ್‌ನಿಂದ ಅಮಿತ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡುತ್ತಾರೆ. ಹಲ್ಲೆ ಬಳಿಕ ಅಪಘಾತದಂತೆ ದೃಶ್ಯ ಬಿಂಬಿಸಲು ಮುಂದಾಗುತ್ತಾರೆ.


ಚಿಲ್ಲರೆ ಹಣದಿಂದ ಸಿಕ್ಕಿ ಬಿದ್ದ ಆರೋಪಿಗಳು

ಅಮಿತ್ ಸಾವಿನ ಪ್ರಕರಣದ ಕುರಿತು ಪೊಲೀಸರು ತಲೆಕೆಡಿಸಿಕೊಂಡಿದ್ದರು, ಕೊನೆಗೆ ತನಿಖೆ ವೇಳೆ ಸಿಗರೆಟ್, ಚಿಲ್ಲರೆ ಹಣದಿಂದ ಆರೋಪಿಗಳ ಸುಳಿತು ಪೊಲೀಸರಿಗೆ ಸಿಕ್ಕಿದೆ. ಆರೋಪಿಗಳು ದಾಬಾ ಒಂದರಲ್ಲಿ ಹಣ ನೀಡಿ ಸಿಗರೇಟ್ ಪಡೆದು ಚಿಲ್ಲರೆ ಬಿಟ್ಟು ಹೋಗಿದ್ದರು. ಅತ್ತ ದಾಬಾ ಮಾಲೀಕ ಚಿಲ್ಲರೆ ಹಣ ಪಡೆದುಕೊಳ್ಳದ ಹಿನ್ನೆಲೆ ವಾಹನದ ನಂಬರ್ ನೋಟ್ ಮಾಡಿಕೊಂಡಿದ್ದನು.

ಆರೊಪಿಗಳು ಅಮಿತ್ ಬೈಕ್ ಪಾಸ್ ಆಗುತ್ತಿದ್ದಂತೆಯೇ, ಚಿಲ್ಲರೆ ತೆಗೆದುಕೊಳ್ಳದೆ ಬೈಕ್ ಅನ್ನು ಬೆನ್ನತ್ತಿದ್ದಾರೆ. ತನಿಖೆ ವೇಳೆ ದಾಬಾ ಮಾಲೀಕ ದಾಖಲಿಸಿಕೊಂಡಿದ್ದ ನಂಬರ್ ಪರಿಶೀಲಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಬಳಿಕ ಆರೋಪಿಗಳು ಸುಪಾರಿ ಮರ್ಡರ್ ಕುರಿತು ಪೊಲೀಸರ ಎದುರು ಬಾಯ್ಬಿಟ್ಡಿದ್ದಾರೆ. ರವಿ ಪಾಟೀಲ್, ಪತ್ನಿ ಚೈತ್ರಾ, ವೆಂಕಟ್ ಗಿರಿಮಾಜೆ, ಆಕಾಶ್, ಸಿಖಂದರ್‌ನನ್ನ‌ ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಚೈತ್ರಾ ಆ್ಯಂಡ್ ಟೀಂ ಜೈಲು ಕಂಬಿ ಎಣಿಸುತ್ತಿದ್ದಾರೆ.

Scroll to Top