ಉಡುಪಿ: ಆಸ್ಪತ್ರೆಯ ವೈದ್ಯರ ನಕಲಿ ಸಹಿ, ಬಿಲ್ ಸೃಷ್ಟಿಸಿ ವಂಚನೆ – ಪ್ರಕರಣ ದಾಖಲು

ಉಡುಪಿ : ಖಾಸಗಿ ಆಸ್ಪತ್ರೆಯ ವೈದ್ಯರ ನಕಲಿ ಸಹಿ ಬಳಸಿ, ನಕಲಿ ಬಿಲ್, ಡಿಸ್ಚಾರ್ಚ್ ಸಮ್ಮರಿಯನ್ನು ಸೃಷ್ಟಿಸಿ ವಿದೇಶದ ಇನ್ಸೂ ಕಂಪನಿಗೆ ಸಲ್ಲಿಸಿರುವ ಘಟನೆ ಬೆಳಕಿಗೆ ಬಂದಿದೆ.

ಆರೋಪಿಯಾದ ಜಹೀನಾಬ್ ಮುಜಾಫರ್ ಇವರು ಸಿ.ಎಸ್.ಐ ಲಾಂಬೋರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ 2019, ಆಗಸ್ಟ್ 03 ರಂದು ಹೊರರೋಗಿಯಾಗಿ ಚಿಕಿತ್ಸೆಯನ್ನು ಪಡೆದಿದ್ದು ನಂತರ ಯಾವುದೇ ಚಿಕಿತ್ಸೆಯನ್ನು ಪಡೆದಿರುವುದಿಲ್ಲ. 2ನೇ ಆರೋಪಿತ ಮುಜಾಫರ್ ಅಲಿ ಮೊಹಮ್ಮದ್ ಶರೀಫ್, 3ನೇ ಆರೋಪಿ ಲುಭ್ನಾ ಬಾನು ಮತ್ತು 4ನೇ ಆರೋಪಿ ಪುರ್ಕಾನ್ ಮುಜಾಫರ್ ರವರು ಒಟ್ಟಿಗೆ ಸೇರಿಕೊಂಡು‌ ಡಾಕ್ಟರ್ ರವರ ನಕಲಿ ಸಹಿಯನ್ನು ಬಳಸಿ ನಕಲು ಬಿಲ್ಲುಗಳು ಮತ್ತು ಡಿಸ್ಚಾರ್ಚ್ ಸಮ್ಮರಿಯನ್ನು ವಿದೇಶದ ಕಂಪನಿ Bhoopa Arabia for Co-operative Insurance Company ಗೆ ಸಲ್ಲಿಸಿದ್ದು, ಇನ್ಸುರೆನ್ಸ್ ಕಂಪನಿಯವರು ಬಿಲ್ಲುಗಳ ಮತ್ತು ಡಿಸ್ಚಾರ್ಚ್ ಸಮ್ಮರಿಗಳ ನೈಜತೆಯನ್ನು ತಿಳಿಯಲು ಆಸ್ಪತ್ರೆಗೆ ಕಳುಹಿಸಿದ್ದು, ಆರೋಪಿಗಳು ಮೋಸ ಮಾಡುವ ಉದ್ದೇಶದಿಂದ ಫೋರ್ಜರಿಯನ್ನು ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

ಈ ಕುರಿತು ಆಸ್ಪತ್ರೆಯ ಆಡಳಿತ ಅಧಿಕಾರಿ ದೀನಾ ಪ್ರಭಾವತಿ ಇವರು ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

You cannot copy content from Baravanige News

Scroll to Top