ಕಾರವಾರದಲ್ಲಿ ಭಾರತೀಯ ಕೋಷ್ಟ್ ಗಾರ್ಡ್ಗಳ ಅಣುಕು ಕಾರ್ಯಾಚರಣೆ; ಕಾರ್ಯವೈಖರಿ ಪ್ರದರ್ಶಿಸಿದ ರಕ್ಷಣಾ ಪಡೆ

ಕಡಲ ನಗರಿ ಕಾರವಾರ ಸಮೀಪದ ಅರಬ್ಬಿ ಸಮುದ್ರದಲ್ಲಿ ಬುಲೆಟ್ಗಳ ಸದ್ದು, ವಾಟರ್ ಫೈರ್ , ಕ್ಷಿಪ್ರ ಕಾರ್ಯಾಚರಣೆಗೆ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಇಳಿದಿದ್ರು. ಅರೇ ಇದೇನಿದು ಅರಬ್ಬಿ ಸಮುದ್ರದಲ್ಲಿ ಶತ್ರುಗಳು ದಾಳಿ ನೆಡೆಸಿದ್ರಾ. ಹೀಗೆ ಏಕಾಏಕಿ ಕಾರ್ಯಾಚರಣೆಯಾದ್ರೂ ಏಕೆ ಅಂತೀರಾ? ಈ ಸ್ಟೋರಿ ಓದಿ.

ಒಂದೆಡೆ ಸಮುದ್ರದ ಅಲೆಗಳನ್ನು ಸೀಳಿ ಶತ್ರುಗಳತ್ತ ಮುನ್ನುಗ್ಗುತ್ತಿರುವ ಕೋಷ್ಟ್ ಗಾರ್ಡ್ ಹಡಗು, ಮತ್ತೊಂದೆಡೆ ಶತ್ರುವನ್ನು ಗುರಿ ಇಟ್ಟು ಗುಂಡಿನ ದಾಳಿ ನಡೆಸುತ್ತಿರುವ ಸಿಬ್ಬಂದಿ. ಅರೆ ಅರಬ್ಬಿ ಸಮುದ್ರದಲ್ಲಿ ಅದೇನ್ ನಡೀತಿದೆ ಅಂತ ಟೆನ್ಷನ್ ಆಗ್ಬೇಡಿ. ಭಾರತೀಯ ಕೋರ್ಟ್ ಗಾರ್ಡ್ ಅಣುಕು ಕಾರ್ಯಾಚರಣೆ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸುತ್ತಿರುವ ದೃಶ್ಯಗಳು.

ಭಾರತೀಯ ಕರಾವಳಿ ರಕ್ಷಣಾ ಪಡೆ ತನ್ನ ಸ್ಥಾಪನಾ ದಿನದ ನೆನಪಿಗಾಗಿ ತನ್ನ ಕಾರ್ಯವೈಖರಿ ವಿವಿಧ ಕಾರ್ಯಾಚರಣೆಯ ಸಾರ್ವಜನಿಕರೆದುರು ಪ್ರದರ್ಶಿಸಿತು. ಕೋಸ್ಟ್‌ಗಾರ್ಡ್ಸ್ ತಟರಕ್ಷಕ ತಂಡದ ಹಡಗುಗಳಾದ ಐಸಿಜಿಎಸ್ ಕಸ್ತೂರ್ ಬಾ ಗಾಂಧಿ, ಐಸಿಜಿಎಸ್ ಸಾವಿತ್ರಿ ಬಾಯಿ ಪುಲೆ, ಐಸಿಜಿಎಸ್ ಸಿ-448, ಐಸಿಜಿಎಸ್ ವಿಕ್ರಮ್ ಕಾರ್ಯಾಚರಣೆಗಾಗಿ ಜನರನ್ನು ಹೊತ್ತುಕೊಂಡು ಸಾಗಿ ತನ್ನ ಕಾರ್ಯ ಕ್ಷಮತೆಯನ್ನು ಪ್ರದರ್ಶಿಸಿತು.

ಇದಷ್ಟೇ ಅಲ್ಲ ಆಳ ಸಮುದ್ರದಲ್ಲಿ ಮೀನುಗಾರರು ಸಿಲುಕಿಕೊಂಡಾಗ ಅವರ ರಕ್ಷಣೆ ಬಗ್ಗೆ ಹಾಗೂ ವಾಣಿಜ್ಯ ಹಡಗುಗಳು ಕಡಲ್ಗಳ್ಳರ ಕೈಗೆ ಸಿಕ್ಕರೆ ಅವುಗಳನ್ನು ರಕ್ಷಿಸುವ ಬಗ್ಗೆಯೂ ಕೋಸ್ಟ್ಗಾರ್ಡ್ ಸಿಬ್ಬಂದಿ ತೋರಿಸಿದ್ರು. ಇನ್ನು ನೌಕೆಗಳ ವೇಗ, ನೌಕೆಯಿಂದ ವಿರೋಧಿಗಳನ್ನು ಸೆದೆ ಬಡಿಯಲು ಫೈರಿಂಗ್ ಕ್ರಮವನ್ನು ಪ್ರದರ್ಶಿಸಲಾಯ್ತು. ಮೊದಲ ಬಾರಿಗೆ ಕೋಸ್ಟ್ಗಾರ್ಡ್ ಕಾರ್ಯಾಚರಣೆಯನ್ನು ಕಣ್ತುಂಬಿಕೊಂಡ ಜನ ದೇಶದ ಸುರಕ್ಷಾ ಪಡೆಯ ಮೇಲೆ ಗೌರವ ಭಾವನೆ ವ್ಯಕ್ತಪಡಿಸಿದರು.

ಒಟ್ಟಾರೆ. ಇಂಡಿಯನ್ ಕೋಸ್ಟ್ ಗಾರ್ಡ್ಸ್ ಸಮುದ್ರದಾಳದಲ್ಲಿ ನಡೆಸಿದ ಅಣುಕು ಕಾರ್ಯಾಚರಣೆ ಜನರಿಗೆ ಅತ್ಯದ್ಭುತ ಅನುಭವ ನೀಡಿತು ಜೊತೆಗೆ ದೇಶ ಸೇವೆಗೆ ತಾವೂ ಸೇರಬೇಕು ಎಂಬ ಹುಮ್ಮಸ್ಸನ್ನು ಹುಟ್ಟಿಸಿದ್ದು ಸುಳ್ಳಲ್ಲ.

You cannot copy content from Baravanige News

Scroll to Top