ಉಡುಪಿ: ಶ್ರೀಕೃಷ್ಣ ಮಠ, ಚರ್ಚ್, ಮಸೀದಿಗೆ ಭೇಟಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್

ಉಡುಪಿ, ಫೆ 06: ಕರ್ನಾಟಕ ಸರಕಾರದ ಇಂಧನ ಸಚಿವ ಕೆಜೆ ಜಾರ್ಜ್ ಇಂದು ತಮ್ಮ ಉಡುಪಿ ಜಿಲ್ಲೆಯ ಭೆಟಿಯ ಸಂದರ್ಭದಲ್ಲಿ ಉಡುಪಿ ಚರ್ಚ್, ಶ್ರೀ ಕೃಷ್ಣ ಮಠ ಮತ್ತು ಉಡುಪಿಯ ಜಾಮೀಯಾ ಮಸೀದಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು.

ಮಂಗಳವಾರ ಉಡುಪಿ ಬಿಷಪ್ ಹೌಸ್ ಮತ್ತು ಶೋಕ ಮಾತಾ ದೇವಾಲಯಕ್ಕೆ ಭೇಟಿ ನೀಡಿದ ಕೆ ಜೆ ಜಾರ್ಜ್ ಪ್ರಾರ್ಥನೆ ಸಲ್ಲಿಸಿದರು. ಉಡುಪಿ ಧರ್ಮಾಧ್ಯಕ್ಷರ ಅನುಪಸ್ಥಿತಿಯಲ್ಲಿ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸಚಿವರನ್ನು ಧರ್ಮಪ್ರಾಂತ್ಯದ ಪರವಾಗಿ ಗೌರವಿಸಿದರು. ಈ ವೇಳೆ ಸಚಿವರು ಧರ್ಮಪ್ರಾಂತ್ಯ ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡರಲ್ಲದೆ ಹಾಗೂ ಕ್ರೈಸ್ತ ಸಮುದಾಯದ ಅಭಿವೃಧ್ದಿಗೆ ಸರಕಾರದ ಯೋಜನೆಗಳನ್ನು ಉಪಯೋಗಿಸಿಕೊಳ್ಳುವಂತೆ ಸೂಚಿಸಿದರು. ಈ ವೇಳೆ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡೆನಿಸ್ ಡೆಸಾ, ಮಣಿಪಾಲ ಕ್ರೈಸ್ಟ್ ಚರ್ಚಿನ ಧರ್ಮಗುರು ವಂ|ರೋಮಿಯೊ ಲೂವಿಸ್, ಕಾರ್ಕಳ ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ನಿರ್ದೇಶಕರಾದ ವಂ|ಆಲ್ಬನ್ ಡಿಸೋಜಾ, ತರಬೇತಿ ನೀರತ ಗುರು ವಂ ಸ್ಟೀಫನ್ ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ ಶ್ರೀ ಕೃಷ್ಣ ಮಠಕ್ಕೆ ಇಂಧನ ಸಚಿವರಾದ ಕೆ. ಜೆ.ಜಾರ್ಜ್ ಅವರು ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ನಂತರ ಗೀತಾಮಂದಿರದಲ್ಲಿ ಪರ್ಯಾಯ ಶ್ರೀಪಾದರ ಭೇಟಿಮಾಡಿ ಅವರಿಂದ ಆಶೀರ್ವಾದ ಪಡೆದರು ಈ ಸಂದರ್ಭದಲ್ಲಿ ಶ್ರೀಪಾದರು ಪರ್ಯಾಯ ಯೋಜನೆ ಬಗ್ಗೆ ತಿಳಿಸಿ ಭಗವದ್ಗೀತೆಯ ವ್ಯಾಪಕ ಪ್ರಚಾರವನ್ನು ತಿಳಿಸಿ ಸಚಿವರಿಗೆ ಭಗವದ್ಗೀತೆಯ ಪುಸ್ತಕವನ್ನು ನೀಡಿ ಹರಸಿದರು.

ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್ ಇಂದು ಉಡುಪಿ ಜಾಮೀಯ ಮಸೀದಿಗೆ ಕೂಡಾ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಮಸೀದಿಯ ಖತೀಬ್ ವೌಲಾನ ಅಬ್ದುರ್ರಶೀದ್ ನದ್ವಿ ದುವಾ ನೆರವೇರಿಸಿದರು. ಮಸೀದಿ ಅಧ್ಯಕ್ಷ ರಿಯಾಝ್ ಅಹ್ಮದ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಮುಖಂಡರಾದ ಎಂ.ಎ.ಗಫೂರ್, ಹಬೀಬ್ ಅಲಿ, ಅಶೋಕ್ ಕುಮಾರ್ ಕೊಡವೂರು, ಕಿಶನ್ ಹೆಗ್ಡೆ ಕೊಳ್ಕೆಬೈಲು ಮೊದಲಾದವರು ಉಪಸ್ಥಿತರಿದ್ದರು.

You cannot copy content from Baravanige News

Scroll to Top