ಅಯೋಧ್ಯಾ ಬಾಲರಾಮನಿಗೆ ರಾಜಸ್ಥಾನದಿಂದ ಹೊರಟ ತೊಟ್ಟಿಲು; ಮಾಜಿ ಶಾಸಕ ರಘುಪತಿ ಭಟ್‌ ಕೊಡುಗೆ

ಉಡುಪಿ: ಶ್ರೀ ಪೇಜಾವರ ಶ್ರೀಗಳ ನೇತೃತ್ವದಲ್ಲಿ ಅಯೋಧ್ಯಾ ರಾಮನ ಸನ್ನಿಧಿಯಲ್ಲಿ ನಡೆಯುತ್ತಿರುವ ಮಂಡಲೋತ್ಸವದ ವೈಭವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಶ್ರೀಗಳ ಮಾರ್ಗದರ್ಶನದಂತೆ ಶ್ರೀಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ರಜತ ಪಲ್ಲಕ್ಕಿಯನ್ನು ಅರ್ಪಿಸಲು ಸಿದ್ದರಾಗುತ್ತಿರುವಂತೆ ಇತ್ತ ಕಡೆ ಮಂಡಲೋತ್ಸವದಲ್ಲಿ ಸಂಘಟನಾತ್ಮಕವಾಗಿ ತೊಡಗಿಕೊಂಡಿರುವ ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್‌ ಅವರು ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲನ್ನು ಅರ್ಪಿಸಲು ಉತ್ಸುಕರಾಗಿದ್ದಾರೆ.
ರಾಜಸ್ಥಾನದಲ್ಲಿ ಬೀಟಿಮರದಿಂದ ನಿರ್ಮಿಸಲಾದ ಅತ್ಯಂತ ಸುಂದರ ಕಾಷ್ಠರಚನೆಗಳುಳ್ಳ ತೊಟ್ಟಿಲನ್ನು ಖರೀದಿಸಲಾಗಿದ್ದು, ಇದೀಗ ಅಯೋಧ್ಯೆಯತ್ತ ಹೊರಟಿದೆ.
ಫೆ. 6 ರ ಸಂಜೆ ತೊಟ್ಟಿಲು ಅಯೋಧ್ಯೆ ತಲುಪಿ, 7 ರಂದು ಸಂಜೆಯ ಉತ್ಸವದಲ್ಲಿ ಶ್ರೀಗಳ ಮೂಲಕ ಇದರ ಅರ್ಪಣೆಯಾಗಲಿದ್ದು, ನೂತನ ತೊಟ್ಟಿಲಲ್ಲಿ ಶ್ರೀಬಾಲರಾಮನಿಗೆ ತೊಟ್ಟಿಲು ಸೇವೆ ನಡೆಸಲಾಗುವುದು ಎಂದು ಭಟ್ ತಿಳಿಸಿದ್ದಾರೆ.

ಅಯೋಧ್ಯೆ ಶ್ರೀರಾಮ ದೇವರ ಮಂಡಲೋತ್ಸವದಲ್ಲಿ ತೊಟ್ಟಿಲು ಸೇವೆಗೆ ರಾಜಸ್ಥಾನದಲ್ಲಿ ಬೀಟೆ ಮರದಿಂದ ನಿರ್ಮಿಸಲಾದ ಸುಂದರ ದಾರುಶಿಲ್ಪದ ತೊಟ್ಟಿಲು ಮಾಜಿ ಶಾಸಕ ಕೆ. ರಘುಪತಿ ಭಟ್‌ ಅವರ ಸೇವಾರ್ಥ ಫೆ. 7ರಂದು ಸಮರ್ಪಣೆಯಾಗಲಿದೆ.

You cannot copy content from Baravanige News

Scroll to Top