ಉಡುಪಿ: ಮತ್ತೆ ಆಕ್ಟಿವ್ ಆದ ನಕ್ಸಲ್ ಚಟುವಟಿಕೆ: ಸ್ಥಳಕ್ಕೆ ಪೊಲೀಸರ ಭೇಟಿ, ಮಾಹಿತಿ ಸಂಗ್ರಹ

ಉಡುಪಿ: ಕೆಲವು ವರ್ಷಗಳಿಂದ ಸಂಪೂರ್ಣ ಸ್ಥಗಿತಗೊಂಡಿದ್ದ ನಕ್ಸಲರ ಚಟುವಟಿಕೆ ಮತ್ತೆ ಬೆಳ್ಕಲ್‌, ಗುಂಡಿನಹೊಳೆ ಹಾಗೂ ಮುದೂರು ಪರಿಸರದಲ್ಲಿ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.

ಮಂಗಳವಾರ ಡಿವೈಎಸ್‌ಪಿ ಬೆಳ್ಳಿಯಪ್ಪ, ನಕ್ಸಲ್‌ ನಿಗ್ರಹ ಪಡೆ, ಕೊಲ್ಲೂರು ಮತ್ತು ಬೈಂದೂರು ಪೊಲೀಸ್‌ ಠಾಣಾಧಿ ಕಾರಿಗಳು ಮತ್ತು ಸಿಬಂದಿ ಈ ಪರಿಸರದಲ್ಲಿ ಶೋಧಕಾರ್ಯ ನಡೆಸಿದರು.
ಸಮವಸ್ತ್ರ ಧಾರಿಗಳಾಗಿ ಶಸ್ತ್ರಧಾರಿಗಳಾಗಿರುವ ವ್ಯಕ್ತಿಗಳು ಬೆಳ್ಕಲ್‌, ಮುದೂರು ಸಹಿತ ಉದಯನಗರದ ಅರಣ್ಯ ಪ್ರದೇಶದಲ್ಲಿರುವ ಮನೆಗಳಿಗೆ ತೆರಳಿ ಹಲವಾರು ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಹೇಳಲಾಗುತ್ತಿದೆ. ಕೆಲವು ಕಡೆ ಭೀತಿಯಿಂದ ಜನರು ಅವರ ಜತೆ ಮಾತುಕತೆ ನಡೆಸದೆ ಕಳುಹಿಸಿದ್ದಾರೆ ಎನ್ನಲಾಗಿದೆ.

You cannot copy content from Baravanige News

Scroll to Top