ಟ್ರಕ್ಕಿಂಗ್ಗೆ ಬಂದಾಗ ದುರಂತ; ಇಬ್ಬರು ಮಾಲೀಕರ ಮೃತದೇಹದ ಮುಂದೆ 2 ದಿನದಿಂದ ರೋದಿಸಿದ ಶ್ವಾನ

ಚಾರಣ ನಡೆಸುವಾಗ ಇಬ್ಬರು ಚಾರಣಿಗರು ಮೃತಪಟ್ಟಿದ್ದು, ಅವರ ಸಾಕು ನಾಯಿಯ ಕಾರಣಕ್ಕೆ ಅವರ ಮೃತದೇಹಗಳು 48 ಗಂಟೆಗಳ ನಂತರ ಪತ್ತೆಯಾಗಿರುವ ಘಟನೆ ಹಿಮಾಚಲ ಪ್ರದೇಶದ ಬೀರ್ ಬಿಲ್ಲಿಂಗ್‌ನಲ್ಲಿ ನಡೆದಿದೆ.

ತೀವ್ರ ಚಳಿ, ಹಿಮಪಾತದ ಕಾರಣದಿಂದ ಟ್ರೆಕ್ಕಿಂಗ್ ತೆರಳಿದ್ದ ಮಹಾರಾಷ್ಟ್ರದ ಅಭಿನಂದನ್ ಗುಪ್ತ ಹಾಗೂ ಪ್ರಣೀತಾ ವಾಲಾ ಸಾವನ್ನಪ್ಪಿದ್ದಾರೆ. ತನ್ನ ಮಾಲೀಕರ ಶವದ ಜಾಗ ಬಿಟ್ಟು ಹೋಗದ ಜರ್ಮನ್ ಶೆಫರ್ಡ್ ಶ್ವಾನ, ಎರಡು ದಿನದವರೆಗೂ ಬೇರೆಯವರು ಆ ಸ್ಥಳಕ್ಕೆ ಬರುವವರೆಗೂ ಮೃತದೇಹದ ಬಳಿಯೇ ಕಾಯುತ್ತಾ ನಿರಂತರವಾಗಿ ಬೊಗಳಿದೆ.

ನಾಯಿ ಬೊಗಳುವುದನ್ನು ಕೇಳಿದ ರಕ್ಷಣಾ ತಂಡ ಚಾರಿಣಿಗರ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಆದ್ರೆ ಮಾಲೀಕರು ಸಾವನ್ನಪ್ಪಿರುವ ದುಃಖದಲ್ಲಿರುವ ಜರ್ಮನ್ ಶೆಫರ್ಡ್ ಶ್ವಾನ ಎರಡು ದಿನದ ಬಳಿಕ ಆಹಾರ ಕೊಟ್ಟರೂ ಸೇವಿಸಿಲ್ಲ ಎಂದು ವರದಿಯಾಗಿದೆ.

Scroll to Top