ಉಡುಪಿ : ತನ್ನ ಮಗಳ ಹುಟ್ಟುಹಬ್ಬಕ್ಕೆ ಕೇಕ್ ಖರೀದಿಗೆ ಬಂದಿದ್ದ ಅಪ್ಪ ಅಪಘಾತದಲ್ಲಿ ಸಾವನಪ್ಪಿದ ಧಾರುಣ ಘಟನೆ ಉಡುಪಿಯ ದೊಡ್ಡಣಗುಡ್ಡೆ ಎಂಬಲ್ಲಿ ನಡೆದಿದೆ.
ಸ್ಕೂಟರ್ ಗೆ ನೀರಿನ ಟ್ಯಾಂಕರ್ ಒಂದು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತದ ಸಂಭವಿಸಿದೆ.
ಮೃತರನ್ನು ಎಪಿಎಂ ಸಿಟಿ ಬಸ್ ಚಾಲಕ ಮಂಜುನಾಥ್ (36) ಎಂದು ಗುರುತಿಸಲಾಗಿದೆ.
ಅವರು ನಿನ್ನೆ ಸಂಜೆ ತಮ್ಮ ಸ್ಕೂಟರ್ ನಲ್ಲಿ ಬಾಳಿಗ ಹಾಸ್ಪಿಟಲ್ ದೊಡ್ಡಣಗುಡ್ಡೆಯಿಂದ ಪೆರಂಪಳ್ಳಿಯ ತಮ್ಮ ಬಾಡಿಗೆ ಮನೆಗೆ ಹೋಗುತ್ತಿದ್ದರು. ಈ ವೇಳೆ ನೀರಿನ ಟ್ಯಾಂಕರ್ ಡಿಕ್ಕಿ ಹೊಡೆದಿದ್ದು, ಮಂಜುನಾಥ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಅವರು ತಮ್ಮ ಮಗಳ 2ನೇ ವರ್ಷದ ಹುಟ್ಟುಹಬ್ಬದ ಆಚರಣೆಗಾಗಿ ಕೇಕ್ ಕೊಂಡು ಹೋಗುತ್ತಿದ್ದರು. ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.