ಹಿರಿಯಡ್ಕ: ವಿಪರೀತ ತಲೆನೋವು – ಮನನೊಂದು ಮಹಿಳೆಯ ಆತ್ಮಹತ್ಯೆ

ಹಿರಿಯಡ್ಕ ಅ.1: ವಿಪರೀತ ತಲೆ ಹಾಗೂ ಕಾಲು ನೋವಿನಿಂದಾಗಿ ಮಾನಸಿಕವಾಗಿ ನೊಂದು ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪೆರ್ಡೂರು ಗ್ರಾಮದ ಹೋಳಿಂಜೆ ಬೀಡು ನಿವಾಸಿ ಇಂದಿರಾ ಶೆಟ್ಟಿ (61) ಆತ್ಮಹತ್ಯೆ ಮಾಡಿಕೊಂಡವರು.ಇವರು ಸುಮಾರು15 ದಿನಗಳಿಂದ ವಿಪರೀತ ತಲೆ ನೋವು ಹಾಗೂ ಕಾಲು ನೋವಿನಿಂದ ಬಳಲುತ್ತಿದ್ದು, ತನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ನಾನು ಸಾಯುತ್ತೇನೆ ನನಗೆ ಭಯವಾಗುತ್ತಿದೆ ಎಂದು ಹೇಳುತ್ತಿದ್ದರು.

ಇದೇ ವಿಷಯದಲ್ಲಿ ಮಾನಸಿಕವಾಗಿ ನೊಂದು ಅ.10 ರಂದು ಮಧ್ಯಾಹ್ನದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಬಾವಿಯ ಕಂಬಕ್ಕೆ ನೇಣು ಬಿಗಿದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಮಗ ಪ್ರಿತೀಶ್ ಎಂಬವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top