ಉಡುಪಿ, ಫೆ 24: ಬಹು ನಿರೀಕ್ಷಿತ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಗರ್ಡರ್ ಗಳು ಫೆ.24ರ ಶನಿವಾರದಂದು ಉಡುಪಿ ತಲುಪಲಿದ್ದು, ಈ ಮೂಲಕ ಕೃಷ್ಣನಗರಿಯ ಜನತೆಯ ಬಹುಕಾಲದ ಕನಸು ನನಸಾಗುತ್ತಿದೆ.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಗಾರ್ಡರ್‌ಗಳನ್ನು ತುಂಬಿದ ಟ್ರಕ್‌ನ ಛಾಯಾಚಿತ್ರಗಳನ್ನು ಹಂಚಿಕೊಂಡು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಇದಕ್ಕೆ ಕಾರಣರಾದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಂಜೆ ಅವರಿಗೆ ಶಾಸಕ ಧನ್ಯವಾದ ಅರ್ಪಿಸಿದ್ದಾರೆ.
ಹುಬ್ಬಳ್ಳಿಯ ರೈಲ್ವೇ ಇಂಜಿನಿಯರಿಂಗ್ ವಿಭಾಗದಲ್ಲಿ ಗರ್ಡರ್‌ಗಳನ್ನು ನಿರ್ಮಿಸಲಾಗಿದ್ದು, ಡಿಆರ್‌ಡಿಒ ಪರಿಶೀಲನೆ ನಡೆಸಿ ಅನುಮೋದನೆ ನೀಡಿದೆ.
ಶುಕ್ರವಾರ ರಾತ್ರಿ ಗರ್ಡರ್ ತುಂಬಿದ ಟ್ರಕ್ ಗಳು ಅಲ್ಲಿಂದ ಹೊರಟ್ಟಿದ್ದು ಶನಿವಾರ ಇಲ್ಲಿದೆ ತಲುಪಲಿದೆ, ಅಂತಿಮ ಕಾಮಗಾರಿ ಆರಂಭಿಸುವ ಮುನ್ನ ಸಂಬಂಧಪಟ್ಟ ಇಲಾಖೆಗಳಿಂದ ಸ್ಥಳ ಪರಿಶೀಲನೆ ನಡೆಯಲಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿದೆ.