ದಿನಾಂಕ 13-10-2022ರಂದು ಶಿರ್ವದಲ್ಲಿ ಬೃಹತ್ ಆಧಾರ್ ನೋಂದಣಿ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ

ಶಿರ್ವ: ಪ್ರಜ್ವಲ್ ಡಿಜಿಟಲ್, ಗ್ರಾಮ ಒನ್ ಶಿರ್ವ ನೇತ್ರತ್ವದಲ್ಲಿ, ಶಿರ್ವ ಗ್ರಾಮ ಪಂಚಾಯತ್, ಲಯನ್ಸ್ ಕ್ಲಬ್ ಶಿರ್ವ – ಮಂಚಕಲ್ ಮತ್ತು ಶಿರ್ವ ಮಹಿಳಾ ಮಂಡಲ ಸಹಭಾಗಿತ್ವದಲ್ಲಿ ಹಾಗೂ  ಅಂಚೆ ಇಲಾಖೆ ಉಡುಪಿ ವಿಭಾಗ ಸಹಕಾರದೊಂದಿಗೆ ದಿನಾಂಕ 13-10-2022 ಗುರುವಾರದಂದು ಬೆಳಿಗ್ಗೆ 9.30 ರಿಂದ ಸಂಜೆ 5 ಗಂಟೆಯ ವರೆಗೆ  “ಬೃಹತ್ ಆಧಾರ್ ನೋಂದಣಿ ಶಿಬಿರ” ಶಿರ್ವದ ಮಹಿಳಾ ಸೌಧದಲ್ಲಿ ನಡೆಯಲಿದೆ

5 ವರುಷದ ಒಳಗಿನ ಮತ್ತು ಮೇಲ್ಪಟ್ಟವರ ಹೊಸ ಆಧಾರ್ ನೋಂದಣಿ, 5 ವರುಷದ ಮತ್ತು 15 ವರುಷದ ಆಧಾರ್ ಅಪ್ಡೇಟ್ ಹಾಗೂ ಮತ್ತು  ಇತರ ಎಲ್ಲಾ ಆಧಾರ್ ನ ಬೆರಳಚ್ಚು, ಫೋಟೋ ಮತ್ತು ಕಣ್ಣು (ಐರಿಸ್) ಅಪ್ಡೇಟ್ , ಆಧಾರ್ ರಾಜ್ಯದಿಂದ ರಾಜ್ಯಕ್ಕೆ ಬದಲಾವಣೆ  ಸೇವೆಗಳು ಸರಕಾರದ ದರದೊಂದಿಗೆ ಲಭ್ಯ.  

ಅದೇ ರೀತಿ  ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇವರ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಮಧುಮೇಹ ತಪಾಸಣೆ, ರಕ್ತದೊತ್ತಡ ಪರೀಕ್ಷೆ, ಕೋವಿಡ್ ಲಸಿಕೆ (ಪ್ರಥಮ, ದ್ವಿತೀಯ ಹಾಗೂ ಬೂಸ್ಟರ್ ಡೋಸ್) ಬೆಳಿಗ್ಗೆ 9-30 ರಿಂದ ಸಂಜೆ 4-00ರವರೆಗೆ ಶಿರ್ವದ ಮಹಿಳಾ ಸೌಧ‌ದಲ್ಲಿ ಲಭ್ಯವಿದೆ.

ಸಾರ್ವಜನಿಕರು ಈ ಎಲ್ಲಾ ಸೇವೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

You cannot copy content from Baravanige News

Scroll to Top