ಉಡುಪಿ : ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಟ್ಟ ಮಗುವಿನೊಂದಿಗೆ ತಾಯಿ ನಾಪತ್ತೆಯಾಗಿದ್ದಾರೆ.
ಪಂಜಿಮಾರು ಕೋಡುಗುಡ್ಡೆ ಶಾಲೆಯ ಬಳಿಯ ನಿವಾಸಿ ಶಕೀಲ್ ಅವರ ಪತ್ನಿ ಸಾಜಿದಾ ಬಾನು (35) ತನ್ನ ಎರಡೂವರೆ ವರ್ಷದ ಪುತ್ರಿ ಮುಹಿಜ ಬಾನುವಿನೊಂದಿಗೆ ಮಿಸ್ಸಿಂಗ್ ಆಗಿದ್ದಾರೆ.
ಫೆ. 22 ರಂದು ಬೆಳಿಗ್ಗೆ 10 ಗಂಟೆಗೆ ಮಣಿಪಾಲದ ಈಶ್ವರ ನಗರದಲ್ಲಿರುವ ಶಕೀಲ್ ಅವರ ಅಕ್ಕ ಸಿಮ್ರಾನ್ ಅವರ ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಈ ಬಗ್ಗೆ ಪತಿ ಶಕೀಲ್ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ : ಶಿರ್ವದಲ್ಲಿ ಅಕ್ಕನ ಮನೆಯಿಂದ ಹೊರಟ ತಾಯಿ-ಮಗು ನಾಪತ್ತೆ..!
![](https://www.baravanige.com/wp-content/uploads/2024/02/IMG-20240228-WA0017.jpg)