ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಇನ್ನಿಲ್ಲ..!

ಉಡುಪಿ : ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ನಿಧನರಾಗಿದ್ದಾರೆ.

ಮೂಲತಃ ಕಾರ್ಕಳ ಕರ್ವಾಲು ಗ್ರಾಮದವರಾದ ಮನೋಹರ್ ಪ್ರಸಾದ್ ಮಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆದಿದ್ದರು.

ನವ ಭಾರತ ಪತ್ರಿಕೆ ಮೂಲಕ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಉದಯವಾಣಿ ಪತ್ರಿಕೆಯಲ್ಲಿ ವರದಿಗಾರ, ಬ್ಯೂರೋ ಚೀಫ್ ಆಗಿದ್ದ ಅವರು ಸಹಾಯಕ ಸಂಪಾದಕರೂ ಆಗಿದ್ದರು. ಒಟ್ಟು 36 ವರ್ಷಗಳ ಉದಯವಾಣಿ ಪತ್ರಿಕೆಗೆ ಸೇವೆ ಸಲ್ಲಿಸಿದ್ದಾರೆ.

ಕಳೆದ ಎರಡು ವರ್ಷದ ಹಿಂದೆ ನಿವೃತ್ತರಾಗಿದ್ದರು. ಪತ್ರಕರ್ತ ಮಾತ್ರವಲ್ಲದೇ, ಕತೆಗಾರ, ನಿರೂಪಕರಾಗಿಯೂ ಮನೋಹರ್ ಪ್ರಸಾದ್ ಜನಪ್ರಿಯರಾಗಿದ್ದರು. ಕರ್ನಾಟಕ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿ ಪಡೆದಿದ್ದರು.

You cannot copy content from Baravanige News

Scroll to Top