ಬೆಚ್ಚ ಬೆಚ್ಚ ನ್ಯೂಸ್
15ನೇ ವಿಶ್ವ ಅಗ್ನಿಶಾಮಕ ಕ್ರೀಡಾಕೂಟ: 2 ಚಿನ್ನ ಗೆದ್ದ ಅಶ್ವಿ‌ನ್‌ ಸನಿಲ್‌ ಕುರ್ಕಾಲು!
ಪುತ್ತೂರು : ಮುಸ್ಲಿಂ ಯುವತಿಗೆ ಚೂರಿ ಇರಿದ ಹಿಂದೂ ಯುವಕ : ಆಸ್ಪತ್ರೆಗೆ ದಾಖಲು!
ಬಟ್ಟೆ ಕೊಳ್ಳುವ ವಿಚಾರಕ್ಕೆ ಪತಿ-ಪತ್ನಿ ನಡುವೆ ಜಗಳ : ಕೊಲೆಯಲ್ಲಿ ಗಲಾಟೆ ಅಂತ್ಯ
ಶಿರ್ವ: ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಂಸ್ಥಾಪಕ ಗೇಬ್ರಿಯಲ್ ನಜರೆತ್ ನಿಧನ
ಅಧಿಕ ಲಾಭಾಂಶ ಆಮಿಷ ; ಹಿರಿಯ ನಾಗರಿಕರಿಗೆ ಲಕ್ಷಾಂತರ ರೂ.ವಂಚನೆ
ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಖಂಡಿಸಿ ಮೆರವಣಿಗೆ, ಮುಷ್ಕರ
ಸೂಡ ಶ್ರೀ ಸುಬ್ರಹ್ಮಣ್ಯ ಕುಣಿತ ಭಜನಾ ಮಂಡಳಿ ಉದ್ಘಾಟನಾ ಸಮಾರಂಭ
ತಂದೆಯನ್ನು ಆಸ್ಪತ್ರೆಗೆ ಸೇರಿಸಿ ಕಾರಿನಲ್ಲಿ ಎಸಿ ಹಾಕಿ ಮಲಗಿದ್ದ ಮಗ ಸಾವು
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ
ಮುಳುವಾದ ಸೌಂದರ್ಯ… ಪತ್ನಿ ನೋಡಲು ಸುಂದರವಾಗಿದ್ದಾಳೆಂದು ಆಕೆಯ ಕಥೆಯನ್ನೇ ಮುಗಿಸಿದ ಪತಿರಾಯ
Next
Prev

ರಾಮೇಶ್ವರಂ ಕೆಫೆ ಸ್ಫೋಟ: ಬಾಂಬರ್ ಫೋಟೋ ಬಿಡುಗಡೆ, ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ

ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ, ಶಂಕಿತ ಉಗ್ರ ಇನ್ನೂ ಪತ್ತೆಯಾಗಿಲ್ಲ. ಬಾಂಬರ್ ಪತ್ತೆಗಾಗಿ ಪೊಲೀಸರ ತಂಡ ಶೋಧ ನಡೆಸುತ್ತಿದೆ. ಈ ಮಧ್ಯೆ ಕೆಫೆ ಬಾಂಬ್ ಸ್ಫೋಟದ ತನಿಖೆಯನ್ನ ಎನ್.ಐ.ಎ ಅಧಿಕಾರಿಗಳು ಅಧಿಕೃತವಾಗಿ ಕೈಗೆತ್ತಿಕೊಂಡಿದ್ದು, ಇದೀಗ ಬಾಂಬರ್ ಫೋಟೋ ಬಿಡುಗಡೆ ಮಾಡಿದೆ. ಅಲ್ಲದೇ ಈ ಬಾಂಬರ್ ಬಗ್ಗೆ ಸುಳಿವು ನೀಡಿದವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಣೆ ಮಾಡಿದೆ.

ಸಿಸಿಬಿ ತನಿಖೆ ವೇಳೆ ಬಾಂಬರ್ ಮಾಸ್ಕ್ ಹಾಕಿಕೊಳ್ಳದ ಫೋಟೋ ಪತ್ತೆಯಾಗಿದ್ದು, ಇದೀಗ ಆ ಫೋಟೋವನ್ನು ಎನ್ಐಎ ಬಿಡುಗಡೆ ಮಾಡಿದೆ.

ಆರೋಪಿ ಬಗ್ಗೆ ಗೊತ್ತಿದ್ದರೆ ಕೂಡಲೇ 080-29510900, 8904241100 ಸಂಖ್ಯೆಗೆ ಫೋನ್‌ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಎನ್‌ಐಎ ಮನವಿ ಮಾಡಿದೆ.

ಕೆಫೆ ಬಾಂಬ್ ಸ್ಫೋಟದ ತನಿಖೆಯನ್ನ ಎನ್‌ಐಎ ಅಧಿಕಾರಿಗಳು ಅಧಿಕೃತವಾಗಿ ಕೈಗೆತ್ತಿಕೊಂಡಿದ್ದು, ನಿನ್ನೆ(ಮಾರ್ಚ್ 05) ಕೆಫೆಗೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿದೆ. ಕ್ಯಾಶ್ ಕೌಂಟರ್, ಸಿಸಿಕ್ಯಾಮರಾ ಪರಿಶೀಲನೆ ನಡೆಸಿ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇನ್ನು ಪೊಲೀಸರು ಸಹ ಸ್ಥಳದಲ್ಲಿ ಕಲೆ ಹಾಕಿರುವ 38 ಸ್ಯಾಂಪಲ್‌ಗಳ ಮಾಹಿತಿಯನ್ನ ಎನ್‌ಐಎ ಅಧಿಕಾರಿಗಳಿಗೆ ನೀಡಿದ್ದಾರೆ.

ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಎಲ್ಲೆಡೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಜೈಲಿನಲ್ಲಿ ಸಹ ಕೈದಿಗಳನ್ನು ಸೆಳೆದು ಉಗ್ರ ಕೃತ್ಯಕ್ಕೆ ಬಳಕೆಯ ಮಾಹಿತಿ ಮೇರೆಗೆ ಎನ್ಎಐ ಅಧಿಕಾರಿಗಳ ಮತ್ತೊಂದಿಷ್ಟು ತಂಡ ದೇಶಾದ್ಯಂತ ಹಲವೆಡೆ ಭರ್ಜರಿ ಕಾರ್ಯಾಚರಣೆ ನಡೆಸಿವೆ.

Related Posts

Scroll to Top