ಅತ್ತೆ ಮೇಲಿನ ಸಿಟ್ಟು ಈ ನೋಟು ನೋಡಿದ್ರೆ ಗೊತ್ತಾಗುತ್ತೆ : ಕಾಣಿಕೆ ಹಾಕಿದ ಸೊಸೆ- ನೋಟ್ ವೈರಲ್..!

ಕಲಬುರಗಿ : ದೇವರಿಗೆ ಹರಕೆ ಹಾಕುವಾಗ ಸಾಮಾನ್ಯವಾಗಿ ದೇವರೆ ಅದು ಕೊಡು ದೇವರೆ ಇದು ಕೊಡು ಅಂತ ಬೇಡಿಕೊಳ್ತಾರೆ. ಆದ್ರೆ ಅಲ್ಲೊಬ್ಬಳು ದೇವರ ಹುಂಡಿಗೆ 50 ರೂಪಾಯಿ ಕಾಣಿಕೆ ಹಾಕಿ ಅದ್ರಲ್ಲಿ ನನ್ನ ಅತ್ತೆ ಬೇಗ ಸಾಯಬೇಕು ಅಂತ ಬರೆದಿದ್ದಾಳೆ. ಹೀಗೆ ನೋಟಿನಲ್ಲಿ ಬರೆದಿರುವ ನೋಟಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಸಲಿಗೆ ಈ ಘಟನೆ ನಡೆದಿದ್ದು, ಕಲಬುರಗಿ ಜಿಲ್ಲೆಯ ದತ್ತಾತ್ರೇಯ ದೇವಸ್ಥಾನದಲ್ಲಿ.

ಗಾಣಿಗಾಪುರ ಕ್ಷೇತ್ರವೆಂದೆ ಪ್ರಸಿದ್ಧಿ ಪಡೆದಿರುವ ಇಲ್ಲಿ ದತ್ತಾತ್ರೇಯ ದೇವರಲ್ಲಿ ಬೇಡಿದ್ದು ಕೊಡುತ್ತಾನೆ ಅನ್ನೋ ನಂಬಿಕೆ ಇದೆ. ಕಳೆದ ಕೆಲ ದಿನಗಳ ಹಿಂದೆ ಗಾಣಿಗಾಪುರ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ ಹುಂಡಿಯಲ್ಲಿ ಈ ನೋಟು ಪತ್ತೆಯಾಗಿದೆ.

ನೋಟಿನ ಮೇಲೆ ಅತ್ತೆ ಬೇಗ ಸಾಯಲಿ ಅಂತ ಬರೆದು ಸೊಸೆಯೊಬ್ಬಳು ದೇವರಿಗೆ ಈ 50 ರೂಪಾಯಿ ಕಾಣಿಕೆ ಹಾಕಿದ್ದಾರೆ. ಹೀಗಾಗಿ ಈ ನೋಟು ವೈರಲ್‌ ಆಗಿ ಅತ್ತೆ ಸೊಸೆ ನಡುವೆ ಅದೆಂತಾ ಭಾಂದವ್ಯ ಇರಬಹುದು ಎಂಬ ಬಗ್ಗೆ ಸಾಕಷ್ಟು ಭಿನ್ನ ಭಿನ್ನ ಚರ್ಚೆಗಳು ನಡೀತಾ ಇದೆ.

You cannot copy content from Baravanige News

Scroll to Top