27 ವರ್ಷದ ಯುವಕನ ಸಾವಿಗೆ ಕಾರಣವಾದ ಬಟರ್ ಚಿಕನ್

ಇಂಗ್ಲೆಂಡ್‌ : ಬಟರ್ ಚಿಕನ್ ತಿಂದು 27 ವರ್ಷದ ಯುವಕ ಮೃತಪಟ್ಟ ಘಟನೆ ನಡೆದಿದೆ.

ಇಂಗ್ಲೆಂಡ್‌ನ 27 ವರ್ಷದ ಯುವಕ ಮೆಕ್ಯಾನಿಕ್ ಜೋಸೆಫ್ ಹಿಗ್ಗಿನ್ಸನ್, ಬಟರ್ ಚಿಕನ್ ಗ್ರೇವಿ ಸೇವಿಸುತ್ತಿದ್ದಂತೆಯೇ ಕಾರ್ಡಿಯಾಕ್ ಅರೆಸ್ಟ್ ಆಗಿ ಸಾವನಪ್ಪಿದ್ದಾರೆ.

ಜೋಸೆಫ್ ಹಿಗ್ಗಿನ್ಸನ್ ಗ್ರೇಟರ್ ಮ್ಯಾಂಚೆಸ್ಟರ್ ನಿವಾಸಿಯಾಗಿದ್ದರು. ಊಟದ ವೇಳೆ ಬಟರ್ ಚಿಕಿನ್ ಸೇವಿಸಿದ ಪರಿಣಾಮ ಅನಾಹುತ ನಡೆದಿದೆ. ಬಟರ್ ಚಿಕನ್ನಲ್ಲಿ ಅನಾಫಿಲ್ಯಾಕ್ಸಿಸ್ ಎಂದು ಕರೆಯಲ್ಪಡುವ ಬೀಜಗಳು ಮತ್ತು ಬಾದಾಮಿಗಳು ಇದ್ದವು.

ಈ ಮೊದಲೇ ಜೋಸೆಫ್ ಹಿಗ್ಗಿನ್ಸನ್ಗೆ ಮಾರಣಾಂತಿಕ ಅಲರ್ಜಿ ಇದ್ದು, ಈ ಬಗ್ಗೆ ಯೋಚಿಸದೇ ಚಿಕನ್ ಕರಿ ತಿಂದು ಸಾವನಪ್ಪಿದ್ದಾನೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ. ಇದರಲ್ಲಿ ರೆಸ್ಟೋರೆಂಟ್ನ ಯಾವುದೇ ತಪ್ಪಿಲ್ಲ. ಅವರಿಗೆ ಆರೋಗ್ಯ ಸಮಸ್ಯೆ ಇದ್ದು ಕೂಡ ಬಟರ್ ಚಿಕನ್ ತಿಂದಿರೋದೇ ಇದಕ್ಕೆ ಕಾರಣ ಎಂದಿದ್ದಾರೆ.

Scroll to Top