ಲೋಕಸಭಾ ಚುನಾವಣೆ ಹಿನ್ನಲೆ; ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ ಮುಂದೂಡಿಕೆ

ನವದೆಹಲಿ: ಯುಪಿಎಸ್ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ (ಪ್ರಿಲಿಮಿನರಿ) 2024 ಕ್ಕೆ ತಯಾರಿ ನಡೆಸುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಪ್ರಮುಖ ಸುದ್ದಿಯೊಂದು ಹೊರ ಬಿದ್ದಿದೆ. ಲೋಕಸಭಾ ಚುನಾವಣೆಯ ದಿನಾಂಕಗಳು ಪ್ರಕಟವಾದ ಹಿನ್ನಲೆಯಲ್ಲಿ ಇದೀಗ ಪೂರ್ವಭಾವಿ ಪರೀಕ್ಷೆಯನ್ನು ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಮುಂದೂಡಿದೆ.

ಪರೀಕ್ಷಾ ದಿನಾಂಕ ಮುಂದೂಡಿಕೆಯ ಬಗ್ಗೆ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಯುಪಿಎಸ್​​ಸಿ ನೀಡಿದ ಮಾಹಿತಿಯ ಪ್ರಕಾರ, ಸಿಎಸ್‌ಇ ಹಾಗೂ ಇಂಡಿಯನ್ ಫಾರೆಸ್ಟ್‌ ಸರ್ವೀಸ್‌ ಪೂರ್ವಭಾವಿ ಪರೀಕ್ಷೆಯನ್ನು 26 ಮೇ 2024 ರ ಬದಲಿಗೆ 16 ಜೂನ್ 2024 ರಂದು ನಡೆಸಲಾಗುವುದು ಎಂದು ತಿಳಿಸಿದೆ.

ಹಲವಾರು ಹುದ್ದೆಗಳಿಗೆ ನೇಮಕಾತಿ

ಕೇಂದ್ರ ಲೋಕಸೇವಾ ಆಯೋಗವು ಈ ನೇಮಕಾತಿಯ ಪ್ರಕ್ರಿಯೆಯ ಮೂಲಕ 1206 ಒಟ್ಟು ಖಾಲಿ ಹುದ್ದೆಗಳನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಭರ್ತಿ ಮಾಡಿಕೊಳ್ಳಲಿದೆ. ಇವುಗಳಲ್ಲಿ 1056 ಹುದ್ದೆಗಳನ್ನು ಭಾರತೀಯ ಆಡಳಿತ ಸೇವೆ/ಐಎಎಸ್ (ನಾಗರಿಕ ಸೇವೆಗಳು) ಗಾಗಿ ಮೀಸಲಿಡಲಾಗಿದೆ. ಅದಲ್ಲದೇ 150 ಹುದ್ದೆಗಳನ್ನು ಭಾರತೀಯ ಅರಣ್ಯ ಸೇವೆಗೆ (ಐಎಫ್‌ಎಸ್) ಮೀಸಲಿಡಲಾಗಿದೆ.

ಯುಪಿಎಸ್​​ಸಿ ಸಿಎಸ್ ಇ ಪ್ರಿಲಿಮಿನರಿ ಪರೀಕ್ಷೆ 2024ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.

You cannot copy content from Baravanige News

Scroll to Top