ಉಡುಪಿ, ಮಾ 21: ಉಡುಪಿಯ ಪರ್ಕಳ ದುರ್ಗಾ ನಗರದಲ್ಲಿ ಕೆರೆ ಅಭಿವೃದ್ಧಿ ಕೆಲಸ ನಡೆಯುತ್ತಿರುವಾಗ ದೇವಾಲಯದ ಕುರುಹುಗಳು ಪತ್ತೆಯಾಗಿವೆ.
ಪರ್ಕಳದ ದುರ್ಗಾ ನಗರದಲ್ಲಿ ಉಷಾ ನಾಯಕ್ ಎಂಬವರ ಮನೆಯ ಬಳಿ ಜಾಗದ ಪಕ್ಕದಲ್ಲಿ ಕೆರೆಯೊಂದು ಇದ್ದು. ಇದೀಗ ಕೆರೆ ಅಭಿವೃದ್ಧಿ ಕೆಲಸ ಪ್ರಾರಂಭವಾಗಿ ನಾಲ್ಕೈದು ದಿವಸ ಕಳೆದಾಗ ಯಂತ್ರದ ಮೂಲಕ ಮಣ್ಣು ತೆರವು ಮಾಡುತ್ತಿರುವಾಗ ಪ್ರಾಣಪೀಠದಲ್ಲಿ ತೀರ್ಥ ಹರಿದು ಹೋಗುವ ಕಲ್ಲಿನಕುಂಡ ಹಾಗೂ ಎಲ್ ಶೇಪ್ ಆಕೃತಿಯ ಕಲ್ಲಿನ ಮೂರ್ತಿಯಂತಹ ವಸ್ತು ದೊರೆತಿದೆ.
ಈ ಹಿಂದೆ ಪರ್ಕಳ ನಗರಸಭಾ ಸದಸ್ಯ ದಿ, ರಾಮದಾಸ್ ನಾಯಕ್ ಅವರು ಈಕೆರೆಯಲ್ಲಿ ಕೆಳ ಪರ್ಕಳದ ಶ್ರೀ ಗೋಪಾಲ ಕೃಷ್ಣ ದೇವಸ್ಥಾನ ಜಿರ್ಣೋದ್ಧಾರ ಸಮಯದಲ್ಲಿ ಆರೂಢ ಪ್ರಶ್ನೆ ಹಾಕಿದಾಗ ಈಕೆರೆಯಲ್ಲಿ ಸುಮಾರು 15 ದಿವಸ ಜೆಸಿಬಿ ಮೂಲಕ ಮಣ್ಣು ತೆರವು ಮಾಡಿದರು ಅಲ್ಲಿ ಯಾವುದೇ ಕುರುಹು ಸಿಕ್ಕಿರಲಿಲ್ಲ.
ಇದೀಗ ದೊಡ್ಡ ಮಟ್ಟದಲ್ಲಿ ಕೆರೆ ಅಭಿವೃದ್ಧಿ ಆಗುತ್ತಿರುವ ಹಿನ್ನೆಲೆಯಲ್ಲಿ ಈಕೆರೆಯಲ್ಲಿ ದೇವಾಲಯದ ಕುರುಹು ಸಿಕ್ಕಿರುವುದು ಇದೊಂದು ವಿಶೇಷವಾಗಿದೆ. ಸ್ಥಳೀಯ ನಿವಾಸಿ ಉಷಾ ನಾಯಕ ಅವರ ಮಾಹಿತಿ ಮೇರೆಗೆ ಸಾಮಾಜಿಕ ಕಾರ್ಯಕರ್ತರ ಗಣೇಶ್ ರಾಜ್ ಸರಳಬೆಟ್ಟು ಅವರು ಸಂಜೆ ವೇಳೆಯಲ್ಲಿ ಸ್ಥ ಳಕ್ಕೆ ಭೇಟಿ ನೀಡಿದ್ದಾರೆ ಈ ಸಂದರ್ಭದಲ್ಲಿ ಮೋಹನ್ ದಾಸ್ ನಾಯಕ್ ಪರ್ಕಳ. ಗಣೇಶ್ ಸಣ್ಣಕ್ಕಿ ಬೆಟ್ಟು ಮತ್ತಿತರರು ಜೊತೆಗಿದ್ದು ಸಹಕರಿಸಿದರು.