ಐಫೋನ್, ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ವಾಟ್ಸ್ ಆ್ಯಪ್ ಕಾಲ್ ರೆಕಾರ್ಡ್ ಹೇಗೆ?: ಇಲ್ಲಿದೆ ಸಿಂಪಲ್ ಟ್ರಿಕ್

ಆ್ಯಪಲ್ ಐಫೋನ್ ನಲ್ಲಿ ವಾಟ್ಸ್ ಆ್ಯಪ್ ಕರೆ ರೆಕಾರ್ಡ್ ಮಾಡುವುದು ತುಂಬಾನೆ ಕಷ್ಟ. ಇದಕ್ಕಾಗಿ ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಇಲ್ಲ. ಆದರೆ, ಮ್ಯಾಕ್ ಮತ್ತು ಐಫೋನ್ ಜೋಡಿಸಿ ಕಾಲ್ ರೆಕಾರ್ಡ್ ಮಾಡಬಹುದು.

ಇತ್ತೀಚೆಗೆ ಬಿಡುಗಡೆ ಆಗಿರುವ ಬಹುತೇಕ ಎಲ್ಲ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಅಟೋಮ್ಯಾಟಿಕ್ ಕಾಲ್ ರೆಕಾರ್ಡ್ (Call recorder) ಆಯ್ಕೆ ನೀಡಲಾಗುತ್ತಿದೆ (ಇತ್ತೀಚಿನ ಗೂಗಲ್ ನ ಹೊಸ ಪಾಲಿಸಿಯಿಂದ ಕಾಲ್ ರೆಕಾರ್ಡಿಂಗ್ ಸ್ವಲ್ಪ ಕಷ್ಟಕರವಾಗಿದೆ). ಆದರೆ, ವಾಟ್ಸ್ ಆ್ಯಪ್ ನಲ್ಲಿ (WhatsApp) ಕರೆ ಬಂದರೆ ಅದು ರೆಕಾರ್ಡ್ ಮಾಡುವುದಿಲ್ಲ. ಪ್ರತಿ ತಿಂಗಳು ವಾಟ್ಸ್ಆ್ಯಪ್ ನಲ್ಲಿ ಸುಮಾರು 100 ಬಿಲಿಯನ್ ಮೆಸೇಜ್ ಗಳು ಹರಿದಾಡುತ್ತಿವೆ. ಪ್ರತಿದಿನ 100 ಕೋಟಿಗೂ ಅಧಿಕ ಮಂದಿ ಕರೆ ಮಾಡುತ್ತಿದ್ದಾರೆ. ಆದರೇ ಕರೆಗಳನ್ನು ರೆಕಾರ್ಡ್ ಮಾಡಲು ಇಲ್ಲಿವರೆಗೂ ವಾಟ್ಸ್ಆ್ಯಪ್ ಯಾವುದೇ ಫೀಚರ್ ಗಳನ್ನು ನೀಡಿಲ್ಲ. ಇದರಿಂದ ಹಲವು ಬಳಕೆದಾರರು ನಿರಾಸೆಗೊಳಗಾಗಿದ್ದರು. ಆದರೇ ಈ ಸಮಸ್ಯೆಗೆ ಪರಿಹಾರ ಇಲ್ಲಿದೆ. ಕೆಲವು ಟ್ರಿಕ್ ಬಳಸಿ ವಾಟ್ಸ್ಆ್ಯಪ್ ಕರೆ ರೆಕಾರ್ಡ್ (WhatsApp Call recorder) ಮಾಡುವ ಆಯ್ಕೆಯ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಸಾಮಾನ್ಯವಾಗಿ ವಾಟ್ಸ್ ಆ್ಯಪ್ ಕರೆ ಬಂದಾಗ ಸ್ಪೀಕರ್ ಆನ್ ಮಾಡಿ, ಇನ್ನೊಂದು ಮೊಬೈಲ್ ಮೂಲಕ ರೆಕಾರ್ಡ್ ಮಾಡಬಹುದು. ಆದರೆ ಇದಕ್ಕಾಗಿ ಎರಡು ಸ್ಮಾರ್ಟ್ ಫೋನ್ ಇರುವುದು ಅವಶ್ಯ. ಇದಿಲ್ಲದಿದ್ದರೇ ಥರ್ಡ್ ಪಾರ್ಟಿ ಆ್ಯಪ್ ಗಳಲ್ಲಿ ಒಂದಾದ ವಾಯ್ಸ್ ರೆಕಾರ್ಡರ್ ಬಳಸಬಹುದು. ಅಂತೆಯೆ Otter.Ai app ಕೂಡ ವಾಯ್ಸ್ ರೆಕಾರ್ಡ್ ಗೆ ಪರಿಣಾಮಕಾರಿಯಾಗಿದ್ದು, ರೆಕಾರ್ಡ್ ಬಟನ್ ಕ್ಲಿಕ್ ಮಾಡುವ ಮೂಲಕ ವಾಟ್ಸ್ಆ್ಯಪ್ ಕರೆಗಳನ್ನು ದಾಖಲಿಸಿಕೊಳ್ಳಬಹುದು. ಈ ಆ್ಯಪ್ ನ ವಿಶೇಷತೆಯೆಂದರೇ ವಾಯ್ಸ್ ಕರೆಗಳು Text ಮಾದರಿಯಲ್ಲಿ ರೂಪಾಂತರಗೊಳ್ಳುತ್ತದೆ. ಇದರ ಮೂಲಕ ಪ್ರತಿ ತಿಂಗಳು ಉಚಿತವಾಗಿ 600 ನಿಮಿಷ ಕರೆಗಳನ್ನು ರೆಕಾರ್ಡ್ ಮಾಡಬಹುದು. ಜೊತೆಗೆ ಕ್ಯೂಬ್ ಕಾಲ್ ಎಂಬ ಆ್ಯಪ್ ಕೂಡ ಇದೆ.

ನಿಮ್ಮ ಫೋನ್ ನಲ್ಲಿ ಇನ್ ಬಿಲ್ಟ್ ಕಾಲ್ ರೆಕಾರ್ಡ್ ಇದ್ದರೆ ವಾಟ್ಸ್ ಆ್ಯಪ್ ಕರೆಯನ್ನು ಈರೀತಿ ರೆಕಾರ್ಡ್ ಮಾಡಬಹುದು. ಆಂಡ್ರಾಯ್ಡ್ ಫೋನ್ ಕರೆ ಮಾಡಿ ಹಾಗೂ ಕಾಲ್ ಕಟ್ ಮಾಡದೆ ಕಾಲ್ ರೆಕಾರ್ಡಿಂಗ್ ಆ್ಯಪ್ ತೆರೆದು ರೆಕಾರ್ಡ್ ಬಟಲ್ ಒತ್ತಿರಿ. ಆಗ ಕರೆ ರೆಕಾರ್ಡಿಂಗ್ ಪ್ರಾರಂಭವಾಗುತ್ತದೆ. ಕಟ್ ಮಾಡಿದ ನಂತರ ನಿಮ್ಮ ಫೋನ್‌ನ ಮೆಮೋರಿಯಲ್ಲಿ ಇದನ್ನು ಕಾಣಬಹುದು.

ಐಫೋನ್ ನಲ್ಲಿ ವಾಟ್ಸ್ ಆ್ಯಪ್ ಕಾಲ್ ರೆಕಾರ್ಡ್ ಹೇಗೆ?: ಆ್ಯಪಲ್ ಐಫೋನ್ ನಲ್ಲಿ ವಾಟ್ಸ್ ಆ್ಯಪ್ ಕರೆ ರೆಕಾರ್ಡ್ ಮಾಡುವುದು ತುಂಬಾನೆ ಕಷ್ಟ. ಇದಕ್ಕಾಗಿ ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಇಲ್ಲ. ಆದರೆ, ಮ್ಯಾಕ್ ಮತ್ತು ಐಫೋನ್ ಜೋಡಿಸಿ ಕಾಲ್ ರೆಕಾರ್ಡ್ ಮಾಡಬಹುದು.

ಮೊದಲಿಗೆ, ನಿಮ್ಮ ಮ್ಯಾಕ್ ನಲ್ಲಿ ಕ್ವಿಕ್ ಟೈಮ್ (QuickTime) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ನಂತರ ನಿಮ್ಮ ಐಫೋನ್ ಅನ್ನು ಮ್ಯಾಕ್ ಗೆ ಕನೆಕ್ಟ್ ಮಾಡಿರಿ. ಈಗ, QuickTime ಅಪ್ಲಿಕೇಶನ್ ತೆರೆಯಿರಿ ಮತ್ತು ಫೈಲ್ ಆಯ್ಕೆಗೆ ಹೋಗಿ. ಅಲ್ಲಿರುವ ನ್ಯೂ ಆಡಿಯೋ ರೆಕಾರ್ಡಿಂಗ್ ಆಯ್ಕೆಯನ್ನು ಒತ್ತಿ ಹಾಗೂ ಐಫೋನ್ ಆಯ್ಕೆಮಾಡಿ. ನಂತರ ಕ್ವಿಕ್ ಟೈಮ್ ಅಪ್ಲಿಕೇಶನ್ ನಲ್ಲಿ ರೆಕಾರ್ಡ್ ಬಟನ್ ಅನ್ನು ಟ್ಯಾಪ್ ಮಾಡಿ. ಈಗ, ಐಫೋನ್ ಮೂಲಕ ವಾಟ್ಸ್ ಆ್ಯಪ್ ಕರೆ ಮಾಡಿ ಮತ್ತು ಆಡ್ ಯೂಸರ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಈಗ ನಿಮ್ಮ ವಾಯ್ಸ್ ಕರೆ ಸ್ವಯಂಚಾಲಿತವಾಗಿ ರೆಕಾರ್ಡ್ ಆಗುತ್ತದೆ ಮತ್ತು ಮ್ಯಾಕ್ ನಲ್ಲಿ ರೆಕಾರ್ಡ್ ಮಾಡಿದ ಫೈಲ್ ಕಾಣಸಿಗುತ್ತದೆ.

You cannot copy content from Baravanige News

Scroll to Top