ಮಗು ದತ್ತು ಪ್ರಕರಣ : ಸೋನು ಶ್ರೀನಿವಾಸ್ ಗೌಡಗೆ 14 ದಿನಗಳ ನ್ಯಾಯಾಂಗ ಬಂಧನ

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಅವರಿಗೆ ಹೆಚ್ಚಿದ ಸಂಕಷ್ಟ. ಮಗುವನ್ನು ಅಕ್ರಮವಾಗಿ ದತ್ತು ಪಡೆದ ಪ್ರಕರಣದಲ್ಲಿ ಅವರಿಗೆ ಈಗ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಸೋನು ಶ್ರೀನಿವಾಸ್ ಗೌಡ ಅವರು ಟಿಕ್ಟಾಕ್ ಹಾಗೂ ರೀಲ್ಸ್ ಮಾಡಿ ಫೇಮಸ್ ಆದವರು.  ಈಗ ಸೋನು ಶ್ರೀನಿವಾಸ ಗೌಡ ಅವರು ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದು ಸಂಕಷ್ಟ ಅನುಭವಿಸಿದ್ದಾರೆ.

ಸೋನು ಶ್ರೀನಿವಾಸ ಗೌಡ ಅವರು ಕಳೆದ ವಾರ ಅರೆಸ್ಟ್ ಆದರು. ಆ ಬಳಿಕ ಈ ಪ್ರಕರಣದಲ್ಲಿ ಅವರನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ವಹಿಸಲಾಗಿತ್ತು. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದ್ದರು. ಈಗ ನ್ಯಾಯಾಂಗ ಬಂಧನ ವಿಧಿಸಿ ಸಿಜೆಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

Scroll to Top