ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಬೆಂಗಳೂರು : ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಕೇಂದ್ರ  ಸಚಿವೆ ಶೋಭಾ ಕರಂದ್ಲಾಜೆ ಅವರ ಬಹಿರಂಗ ಪ್ರಚಾರ ಮತ್ತು ಭಾಷಣಗಳಿಗೆ ನಿರ್ಭಂದಿಸುವಂತೆ ರಾಜ್ಯ ಕಾಂಗ್ರೆಸ್ ಮುಖಂಡ ಕುಶಾಲ್ ಹರುವೇಗೌಡ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ..!?

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 2656 ಪೋಲಿಂಗ್ ಬೂನ್ಸ್ ಒಳಪಡುವ ಸುಮಾರು 28-30 ಲಕ್ಷ ಜನ ಮತದಾರರು ಇದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವು ಹಿಂದೂ- ಮುಸ್ಲಿಂ-ಕ್ರೈಸ್ತರು ಎಂಬ ಬೇಧ-ಭಾವವಿಲ್ಲದೆ, ಜಾತಿ-ಮತ-ಪಂಥಗಳನ್ನು ಮೀರಿ ಜನರು ಸಹೋದರತ್ವದಿಂದ ವಾಸಿಸುತ್ತಿದ್ದಾರೆ.

ಇಂತಹ ಶಾಂತಿ ಸೌಹಾರ್ದತೆಯ ಬೀಡು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದಿಂದ ಪ್ರಚೋದನಕಾರಿ ಭಾಷಳಿಗೆ ಕೋಮು ಗಲಭೆಗಳಿಗೆ ಕುಖ್ಯಾತರಾಗಿರುವ ಶೋಭಾ ಕರಾಂದ್ಲಾಜೆ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಜನರಲ್ಲಿ ಆತಂಕ ಬಹಳಷ್ಟು ಮೂಡಿಸಿದೆ.

ಅವರ ರಾಜಕೀಯ ಇತಿಹಾಸದೂದ್ದಕ್ಕೂ ಶಾಂತಿ-ಸೌಹಾರ್ದತೆ ಕದಡುವಂತಹ ಕೋಮುಗಲಭೆಗೆ ಪ್ರಚೋದಿಸುವಂತಹ ಭಾಷಣಗಳಿಂದಲೇ ಕುಖ್ಯಾತಿ ಹೊಂದಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಯಾವುದೇ ಕಾರಣಕ್ಕೂ ಚುನಾವಣಾ ಪ್ರಚಾರದಲ್ಲಿ ಭಾಷಣಕ್ಕೆ ಅವಕಾಶ ನೀಡದೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಾದ್ಯಂತ ಇಂತಹ ದುರ್ಘಟನೆಗಳು ಆಗದಂತ ಮುನ್ನೆಚ್ಚರಿಕೆ ವಹಿಸಿ ಶೋಭಾ ಕರಂದ್ಲಾಜೆ ಅವರ ಚುನಾವಣಾ ಭಾಷಣಗಳಿಗೆ ಅನುಮತಿ ನೀಡದೆ ನಿರ್ಬಂಧಿಸಬೇಕೆಂದು ಜಿಲ್ಲಾ ಕಾರ್ಯದರ್ಶಿ ಕುಶಾಲ್ ಹರುವೆಗೌಡ ಮತ್ತು ಸಂಜಯ್ ದೂರು ನೀಡಿದ್ದಾರೆ.

Scroll to Top