ಮೊಬೈಲಿಗೆ ಬಂದಿದ್ದ ಲಿಂಕ್‌ ಕ್ಲಿಕ್ಕಿಸಿ ಸಾವಿರಾರು ರೂ. ಕಳೆದುಕೊಂಡ ವ್ಯಕ್ತಿ

ಉಡುಪಿ : ವಾಟ್ಸ್‌ ಆ್ಯಪ್‌ನಲ್ಲಿ ಬಂದ ಅನಾಮಧೇಯ ಲಿಂಕ್‌ ಕ್ಲಿಕ್ಕಿಸಿ ವ್ಯಕ್ತಿಯೊಬ್ಬರು ಸಾವಿರಾರು ರೂ. ಕಳೆದುಕೊಂಡ ಘಟನೆ ನಡೆದಿದೆ.

ಮೂಡುಬೆಳ್ಳೆಯ ರೋಶನ್‌ ಜಾಯ್‌ ಅವರು ಅಮೆಜಾನ್‌ ಕಂಪೆನಿಯಲ್ಲಿ ಆನ್‌ಲೈನ್‌ ಮೂಲಕ ಗೀಸರ್‌ ಬುಕ್‌ ಮಾಡಿದ್ದರು. ಈ ವಸ್ತು ಬಾರದ ಕಾರಣ ಗೂಗಲ್‌ನಲ್ಲಿ ಅಮೆಜಾನ್‌ ಕಂಪೆನಿಯ ಕಸ್ಟಮರ್‌ ಕೇರ್‌ ಸಂಖ್ಯೆ ಹುಡುಕಿ ನಂಬರ್‌ಗೆ ಕರೆ ಮಾಡಿದಾಗ ಅವರ ಮೊಬೈಲ್‌ ಸಂಖ್ಯೆಗೆ ವಾಟ್ಸ್‌ ಆ್ಯಪ್‌ ಮೂಲಕ ಲಿಂಕ್‌ (customersupportrq13.apk )
ಒಂದು ಬಂದಿತ್ತು.

ಲಿಂಕ್‌ ಕ್ಲಿಕ್ಕಿಸಿ ಅದರಲ್ಲಿ ತಿಳಿಸಿದಂತೆ ರೋಶನ್‌ ಜಾಯ್‌ ಅವರು ತನ್ನ ವೈಯಕ್ತಿಕ ಮಾಹಿತಿ, ಕ್ರೆಡಿಟ್‌ ಕಾರ್ಡ್‌ ಮಾಹಿತಿಯನ್ನು ನಮೂದಿಸಿದ್ದರು. ಬಳಿಕ ಅವರ ಗಮನಕ್ಕೆ ಬಾರದೆ ಕೆನರಾ ಬ್ಯಾಂಕ್‌ ಮತ್ತು ಎಸ್‌ ಬ್ಯಾಂಕ್‌ ಕ್ರೆಡಿಟ್‌ ಕಾರ್ಡ್‌ಗಳಿಂದ ಹಾಗೂ ಕೆನರಾ ಬ್ಯಾಂಕ್‌ ಉಳಿತಾಯ ಖಾತೆಯಿಂದ ಹಂತ ಹಂತವಾಗಿ ಒಟ್ಟು 90,807 ರೂ. ಕಡಿತವಾಗಿದೆ. ಈ ಬಗ್ಗೆ ಸೆನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top