ಕಾರ್ಕಳ, ಏ 09: ಕಾರ್ಕಳದ ಮುನಿಯಾಲು ಎಂಬಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಬಿಸಿಲ ಬೇಗೆಯಿಂದ ರಕ್ಷಣೆ ಪಡೆಯಲು ಕಾರ್ಕಳದ ಮುನಿಯಾಲು ಎಂಬಲ್ಲಿ ಮನೆಯ ಒಳಗಡೆ ಆಶ್ರಯ ಪಡೆದಿರುವುದು ಕಂಡು ಬಂದಿದೆ. ಬಳಿಕ ಉರಗ ಹಿಡಿಯುವವರು ಬಂದು ಆ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಬಿಡಲಾಯಿತು.
ಅದೃಷ್ಟವಶಾತ್ ಮನೆಯ ನಿವಾಸಿಗಳಿಗೆ ಯಾವುದೇ ತೊಂದರೆ ನೀಡಿಲ್ಲ. ವಾತಾವರಣದ ಉಷ್ಣತೆ, ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ಮನೆ ಮಂದಿ ಬಹಳ ಜಾಗರೂಕತೆ ವಹಿಸುವುದು ಈ ಸಮಯದಲ್ಲಿ ಅಗತ್ಯವಾಗಿದೆ.
ಹಾವುಗಳು ಕತ್ತಲು, ನೆರಳು ಬೀಳುವ, ತಂಪಾದ ಸ್ಥಳಗಳನ್ನು ಹುಡುಕಿಕೊಂಡು ಬರುತ್ತವೆ. ಎಚ್ಚರಿಕೆ ವಹಿಸಿ, ಪಾದರಕ್ಷೆ, ಬೂಟ್ಸ್‌ಗಳನ್ನು ಧರಿಸುವಾಗಲೂ ಮುನ್ನೆಚ್ಚರಿಕೆ ಗಮನಿಸುವುದು ಒಳ್ಳೆಯದು.