ಮಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಎ.14ರಂದು ಮಂಗಳೂರಿಗೆ ಭೇಟಿ ನೀಡಿದ್ದು, ನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ರಾತ್ರಿ ಸರಿ ಸುಮಾರು 7.45 ಕ್ಕೆ ಮಂಗಳೂರು ಆಗಮಿಸಿ ಪ್ರಧಾನಿ ನಾರಾಯಣ ಗುರು ವೃತ್ತದಲ್ಲಿ ನಾರಾಯಣಗುರುಗಳ ಪ್ರತಿಮೆಗೆ ಮಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದ್ದಾರೆ. ಬಳಿಕ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಉಡುಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರ ಜೊತೆ ರೋಡ್ ಶೋ ನಡೆಸಿದ್ದಾರೆ.
ನಾರಾಯಣ ಗುರು ವೃತ್ತದಿಂದ ನವಭಾರತ್ ವೃತ್ತದ ವರೆಗೆ ಬೃಹತ್ ರೋಡ್ ಶೋ ನಡೆಸಿದ್ದಾರೆ. ಪ್ರಧಾನಿ ಮೋದಿ ಅವರ ಸಮಾವೇಶ ರದ್ದಾಗಿ ರೋಡ್ ಶೋ ನಿಗದಿಯಾಗಿದ್ದ ಹಿನ್ನಲೆಯಲ್ಲಿ ನಗರದಲ್ಲಿ ಭಾರಿ ಭದ್ರತೆ ನಡೆಸಲಾಗಿತ್ತು. ಹೀಗಾಗಿ ರೋಡ್ ಶೋ ನಡೆಯುವ ರಸ್ತೆಯಲ್ಲಿ ರಸ್ತೆಯ ಇಕ್ಕೆಲೆಯಲ್ಲೂ ಬ್ಯಾರಿಕೇಡ್ ಅಳವಡಿಸಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು.
ರೋಡ್ ಶೋ ನಡೆದ ಲಾಲ್‌ಭಾಗ್ ಬಳ್ಳಾಲ್ ಭಾಗ್, ಪಿವಿಎಸ್ ಹಾಗೂ ರೋಡ್ ಶೋ ಕೊನೆಗೊಂಡ ನವಭಾರತ್ ಸರ್ಕಲ್ ವರೆಗೂ ಸಾವಿರಾರು ಜನರು ಮೋದಿಯವರಿಗಾಗಿ ಕಾದು ಕುಳಿತಿದದ್ದರು. ಮೋದಿ ಆಗಮಿಸುತ್ತಿದ್ದಂತೆ ಮೋದಿ ಘೋಷಣೆ ಮುಗಿಲು ಮುಟ್ಟಿದ್ದು ಅದು ರೋಡ್ ಶೋದ ಉದ್ದಕ್ಕೂ ಕೇಳಿಸಿ ಇಡೀ ನಗರವೇ ಮೋದಿ ಘೋಷ ಮೊಳಗಿತ್ತು. 7. 50 ಕ್ಕೆ ಆರಂಭವಾದ ರೋಡ್ ಶೋ 8. 45ಕ್ಕೆ ನವಭಾರತ್ ವೃತ್ತದಲ್ಲಿ ಅಂತ್ಯಗೊಂಡಿದೆ.