ಐಸ್ ಕ್ರೀಂ ಸೇವಿಸಿ ಅವಳಿ ಮಕ್ಕಳ ಸಾವಿನ ಪ್ರಕರಣಕ್ಕೆ ಟ್ವಿಸ್ಟ್; ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಬಯಲು

ಶ್ರೀರಂಗಪಟ್ಟಣ, ಏ.19: ತಳ್ಳುಗಾಡಿಯಿಂದ ಐಸ್ ಕ್ರೀಂ ತಿಂದ ಬಳಿಕ ಅವಳಿ ಕಂದಮ್ಮಗಳು ಸಾವನ್ನಪ್ಪಿದ ಧಾರುಣ ಘಟನೆ ಏ.17 ಮಧ್ಯಾಹ್ನ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿತ್ತು. ಆದರೆ ಇದೀಗ ಈ ಪ್ರಕರಣಕ್ಕೆ ಟ್ವಿಸ್ಟ್ ದೊರಕಿದೆ. ಮರಣೋತ್ತರ ಪರೀಕ್ಷೆ ಬಳಿಕ ಸತ್ಯಾಂಶ ಗೊತ್ತಾಗಿದ್ದು, ತಾಯಿಯೇ ಮಗುವಿಗೆ ವಿಷ ಹಾಕಿ ಸಾಯಿಸಿದ್ದಾಳೆ ಎನ್ನುವುದು ಖಚಿತವಾಗಿದೆ.

ಈ ಘಟನೆಯಲ್ಲಿ ಅವಳಿ ಮಕ್ಕಳು ಐಸ್‌ ಕ್ರೀಮ್‌ ತಿಂದು ಅಸ್ವಸ್ಥರಾದ ಬಳಿಕ ಸಾವು ಕಂಡಿದ್ದಾರೆ ಎಂದು ಹೇಳಲಾಗಿತ್ತು. ಕೌಟುಂಬಿಕ ಕಲಹದ ಕಾರಣಕ್ಕೆ ಒಟ್ಟು ಮೂರು ಮಕ್ಕಳಿಗೆ ತಾಯಿ ಪೂಜಾ ವಿಷ ಹಾಕಿ ತಾನು ಸೇವಿಸಿದ್ದಳು. ಪರಿಣಾಮ ಪೂಜಾ ಹಾಗೂ ಪ್ರಸನ್ನ ದಂಪತಿಗಳ ಒಂದೂವರೆ ವರ್ಷದ ಅವಳಿ ಜವಳಿ ಕಂದಮ್ಮಗಳು ಸಾವು ಕಂಡಿದ್ದರು.

ಪೊಲೀಸ್‌ ತನಿಖೆಯ ಬಳಿಕ ತಾಯಿ ಪೂಜಾಳೇ ಮೂವರು ಮಕ್ಕಳಿಗೆ ವಿಷ ಹಾಕಿದ್ದು ಗೊತ್ತಾಗಿದೆ. ತ್ರಿಶುಲ್, ತ್ರಿಶ ಅವಳಿ ಮಕ್ಕಳು ಹಾಗೂ ಮಗಳು ಬೃಂದಾಗೆ ಪೂಜಾ ವಿಷ ಹಾಕಿದ್ದಳು. ಬಳಿಕ ಐಸ್ ಕ್ರೀಂ ತಿಂದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಲಾಗಿತ್ತು. ಇದೀಗ ಪೊಲೀಸ್ ವಿಚಾರಣೆ ವೇಳೆ ಸತ್ಯಾಂಶ ಬಯಲಾಗಿದೆ.

ಪೂಜಾ ಪತಿ ಪ್ರಸನ್ನ ಜೊತೆ ಪದೇ ಪದೇ ಜಗಳವಾಡುತ್ತಿದ್ದ. ಮನೆಯಲ್ಲಿ ಜಗಳ ವಿಕೋಪಕ್ಕೆ ತಿರುಗಿತ್ತು. ಜಗಳದಿಂದ ಬೇಸತ್ತು ಬುಧವಾರ ಮಕ್ಕಳಿಗೆ ಪೂಜಾ ವಿಷ ಹಾಕಿದ್ದಳು. ಮನೆಯಲ್ಲಿ ಇದ್ದ ಜಿರಳೆಯ ಲಕ್ಷ್ಮಣ ರೇಖೆಯನ್ನು ಊಟಕ್ಕೆ ಹಾಕಿ ಮಕ್ಕಳಿಗೆ ಪೂಜಾ ತಿನ್ನಿದ್ದಳು. ಬಳಿಕ ಅದೇ ಲಕ್ಷ್ಮಣ ರೇಖೆಯನ್ನು ಪೂಜಾ ಕೂಡ ತಿಂದಿದ್ದಳು. ಬಳಿಕ ಮಕ್ಕಳು ಹಾಗೂ ಪೂಜಾಳನ್ನು ಮಂಡ್ಯ‌ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ ಆಸ್ಪತ್ರೆಯಲ್ಲಿ ಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿತ್ತು. ತಾಯಿ‌ ಪೂಜಾ ಹಾಗೂ ಮೊದಲ ಮಗಳು ಬೃಂದಾಗೆ ಮಾತ್ರ ಚಿಕಿತ್ಸೆ ಮುಂದುವರಿದಿದೆ.

You cannot copy content from Baravanige News

Scroll to Top